ಭಾರತ, ಮಾರ್ಚ್ 23 -- ಬೆಂಗಳೂರಿಗೆ ಸಮೀಪದಲ್ಲೇ ಇರುವ ನಂದಿಬೆಟ್ಟ ಎಂದರೆ ಸಿಲಿಕಾನ್ ಸಿಟಿಯ ಜನರಿಗೆ ಸ್ವರ್ಗದಂತೆ. ನಂದಿ ಗಿರಿಧಾಮವು ಬೆಂಗಳೂರು ಸಮೀಪದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದು. ಇದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ. ವೀಕೆಂಡ್‌ಗಳಲ್ಲಿ ಬೆಂಗಳೂರು ಜನರು ನಂದಿ ಬೆಟ್ಟಕ್ಕೆ ಜಾಲಿರೈಡ್ ಹೋಗುವುದು ಸಾಮಾನ್ಯ. ಅದರಲ್ಲೂ ಇದೀಗ ಕೊಂಚ ಮಳೆ ಕೂಡ ಸುರಿದಿದ್ದು, ವಾತಾವರಣ ಸೂಪರ್ ಆಗಿರುತ್ತೆ, ಒಮ್ಮೆ ನಂದಿಬೆಟ್ಟದ ಕಡೆ ಹೋಗಿ ಪ್ರಕೃತಿ ಸೌಂದರ್ಯವನ್ನು ಸವಿದು ಬರೋಣ ಅಂತ ನೀವು ಅಂದುಕೊಳ್ತಾ ಇದ್ರೆ ಕೊಂಚ ಯೋಚಿಸಿ. ಯಾಕಂದ್ರೆ ನಂದಿ ಬೆಟ್ಟಕ್ಕೆ ಒಂದು ತಿಂಗಳ ಕಾಲ ಪ್ರವೇಶ ನಿರ್ಬಂಧ ಹೇರಲಾಗಿದೆ. ಹಾಗಂತ ಬೇಸರ ಪಡುವ ಅಗತ್ಯವೂ ಇಲ್ಲ. ವಾರಾಂತ್ಯದಲ್ಲಿ ಪ್ರವೇಶಕ್ಕೆ ಅವಕಾಶವಿದೆ. ಈ ಪ್ರವೇಶ ನಿರ್ಬಂಧ ನಾಳೆಯಿಂದ ಅಂದರೆ ಮಾರ್ಚ್ 24 ರಿಂದಲೇ ಆರಂಭವಾಗಲಿದೆ.

ನಂದಿಗಿರಿಧಾಮದ ರಸ್ತೆ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ 1 ತಿಂಗಳ ಕಾಲ ನಂದಿಬೆಟ್ಟ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಮಾಹಿತಿ ...