Bangalore, ಮಾರ್ಚ್ 22 -- Namratha Gowda Love story: ಜನಪ್ರಿಯ ಕನ್ನಡ ಯೂಟ್ಯೂಬ್‌ ಚಾನೆಲ್‌ "ರಾಜೇಶ್‌ ಗೌಡ" ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯಾರಿಗೂ ಹೇಳದ ತನ್ನ ಬದುಕಿನ ಪ್ರೇಮಕಥೆಯನ್ನು ನಟಿ ನಮ್ರತಾ ಗೌಡ ಹೇಳಿದ್ದಾರೆ. ಬಿಗ್‌ಬಾಸ್‌ ಕನ್ನಡ ಮಾಜಿ ಸ್ಪರ್ಧಿ, ಕನ್ನಡ ಸೀರಿಯಲ್‌ ನಟಿ ನಮ್ರತಾ ಗೌಡ ಅವರು ಪಿಯುಸಿಯಲ್ಲಿ ಓದುತ್ತಿರುವಾಗ ನಡೆದ ಕಥೆಯನ್ನು ಅವರು ಹೇಳಿದ್ದಾರೆ. "ನಾನು ಆಗ ಆರ್ಕಿಟೆಕ್ಚರ್‌ ಐದು ವರ್ಷದ ಕೋರ್ಸ್‌ ಮಾಡ್ತಾ ಇದ್ದೆ. ಇದು ಸುಲಭದ ವಿಷಯವಲ್ಲ. ಐದು ವರ್ಷಗಳ ಕಾಲ ಕಷ್ಟಪಟ್ಟೆ. ಅದೇ ಸಮಯದಲ್ಲಿ ಶೂಟಿಂಗ್‌ನಲ್ಲಿಯೂ ಭಾಗವಹಿಸುತ್ತಿದ್ದೆ. ಆಗ ನಾನು ಪುಟ್ಟ ಗೌರಿ ಮದುವೆ, ಚೆಲುವಿ ಮಾಡುತ್ತಿದ್ದೆ. ಆಕಾಶ ದೀಪಂ ಮುಗಿಯುವ ಹಂತದಲ್ಲಿದೆ. ಪುಟ್ಟ ಗೌರಿ ಮದುವೆ ನನ್ನ ಕರಿಯರ್‌ನಲ್ಲಿ ದೊಡ್ಡ ಬ್ರೇಕ್‌. ಬಸ್‌ನಲ್ಲಿ ಎಲ್ಲಾ ಹೋಗುವಾಗ ಮುಖ ಸುತ್ತಿಕೊಂಡು ಹೋಗುತ್ತಿದ್ದೆ. ಎಲ್ಲರೂ ಗುರುತು ಹಿಡಿದು ಹಿಮಾ ಹಿಮಾ ಎನ್ನುತ್ತಿದ್ದರು. ಇದು ನಮಗೆಲ್ಲಾ ತುಂಬಾ ಹೆಸರು ತಂದುಕೊಟ್ಟ ಧಾರಾವಾಹಿ" ಎಂದು ನಮ್ರತಾ ಗೌ...