Bangalore, ಮಾರ್ಚ್ 25 -- Bigg Boss Namratha Gowda story: ಜನಪ್ರಿಯ ಕನ್ನಡ ಯೂಟ್ಯೂಬ್‌ ಚಾನೆಲ್‌ "ರಾಜೇಶ್‌ ಗೌಡ" ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯಾರಿಗೂ ಹೇಳದ ತನ್ನ ಬದುಕಿನ ಪ್ರೇಮಕಥೆಯನ್ನು ನಟಿ ನಮ್ರತಾ ಗೌಡ ಹೇಳಿದ್ದಾರೆ. ಬಿಗ್‌ಬಾಸ್‌ ಕನ್ನಡ ಮಾಜಿ ಸ್ಪರ್ಧಿ, ಕನ್ನಡ ಸೀರಿಯಲ್‌ ನಟಿ ನಮ್ರತಾ ಗೌಡ ಅವರು ಪಿಯುಸಿಯಲ್ಲಿ ಓದುತ್ತಿರುವಾಗ ನಡೆದ ಕಥೆಯನ್ನು ಅವರು ಹೇಳಿದ್ದಾರೆ.

"ಕಾಲೇಜು ಲೈಫ್‌ನಲ್ಲಿ ಲವ್‌ ಏನಾದರೂ ಇತ್ತ?" ಎಂಬ ಪ್ರಶ್ನೆಗೂ ನಮ್ರತಾ ಉತ್ತರಿಸಿದ್ದಾರೆ. "ಇದು ನನ್ನ ಅತ್ಯಂತ ಖಾಸಗಿ ಪ್ರಶ್ನೆ. ಲವ್‌ ಬಗ್ಗೆ ಎಲ್ಲಾ ಮಾತನಾಡೋದು ನನಗೆ ಅನ್‌ಕಂಫರ್ಟೆಬಲ್‌ ಆಗುತ್ತದೆ. ನಾನು ಏನೂ ಮಾಡಿದರೂ ಅಪ್ಪನಿಗೆ ಅಮ್ಮನಿಗೆ ಗೊತ್ತೇ ಇರುತ್ತದೆ. ನಾನು ಓಪನ್‌ ಆಗಿ ಎಲ್ಲಾ ಹೇಳ್ತಿನಿ" ಎಂದರು.

" ನನ್ನ ಜೀವನದಲ್ಲಿಯೂ ಒಂದು ಲವ್‌ ಆಗಿತ್ತು. ಅದೇ ಫಸ್ಟ್‌ ಮತ್ತು ಅದೇ ಲಾಸ್ಟ್‌. ಆಗ ಟೆನ್ತ್‌ ಮುಗಿದಿತ್ತು. ಪಿಯು ಕಾಲೇಜಿಗೆ ಪ್ರವೇಶಿಸಿದ ಸಮಯವದು. ನಾನು ಹುಡುಗರ ತರಹನೇ ಬೆಳೆದವಳು. ಹುಡುಗರೇ ಫ್ರೆಂಡ್ಸ್‌ ಇರ...