Bengaluru, ಫೆಬ್ರವರಿ 13 -- ನಮ್ಮ ಪ್ರತಿಯೊಂದು ಕೈಬೆರಳುಗಳು ಹೇಗೆ ಭಿನ್ನವಾಗಿದೆಯೋ ಹಾಗೆಯೇ ಉಗುರಿನ ಆಕಾರವೂ ಕೂಡ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿದೆ. ನೀವೆಂದಾದರೂ ನಿಮ್ಮ ಉಗುರುಗಳ ಬುಡದಲ್ಲಿ ಸಣ್ಣದಾದ, ಬಿಳಿಯಾದ, ಅರ್ಧಚಂದ್ರಾಕಾರದ ಗುರುತನ್ನು ಗಮನಿಸಿದ್ದೀರಾ? ಇದನ್ನು "ಲುನುಲಾ" ಎಂದು ಕರೆಯಲಾಗುತ್ತದೆ. ಅವು ನಿಮ್ಮ ವ್ಯಕ್ತಿತ್ವದ ಬಗ್ಗೆ ಕೆಲವೊಂದು ಮಹತ್ತರ ಮಾಹಿತಿಯನ್ನು ಬಹಿರಂಗಪಡಿಸಬಹುದು ಎಂದು ನಿಮಗೆ ಗೊತ್ತಿತ್ತೇ?

ನಿಮ್ಮ ಉಗುರಿನ ಬುಡದಲ್ಲಿರುವ ಈ ಅರ್ಧ ಚಂದ್ರನಾಕೃತಿಯ ಲುನುಲಾಗಳು ದೊಡ್ಡದಾಗಿ, ಸ್ಪಷ್ಟವಾಗಿ ಕಾಣಿಸುತ್ತಿದ್ದರೆ, ನೀವು ರಚನಾತ್ಮಕ ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎನ್ನಲಾಗುತ್ತದೆ. ಸ್ಪಷ್ಟ ಲುನುಲಾಗಳನ್ನು ಹೊಂದಿರುವ ಜನರು ಹೆಚ್ಚಾಗಿ ಶಕ್ತಿಯುತರಾಗಿರುತ್ತಾರೆ, ಗುರಿ ಆಧಾರಿತರು ಮತ್ತು ಶಿಸ್ತುಬದ್ಧರಾಗಿರುತ್ತಾರೆ. ನೀವು ಅದ್ಭುತ ಆಲೋಚನೆಗಳನ್ನು ಹೊಂದಿರುವುದಷ್ಟೇ ಅಲ್ಲದೆ, ಅವುಗಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂಬುದು ನಿಮಗೆ ಸ್ಪಷ್ಟವಾಗಿ ತಿಳಿದಿರುತ್ತದೆ. ವಾಸ್ತುಶಿಲ...