Nagpur, ಮಾರ್ಚ್ 19 -- Nagpur Violence: ಮಹಾರಾಷ್ಟ್ರದಲ್ಲಿ ಕೋಮು ಗಲಭೆಗಳಿಗೆ ಹೆಸರುವಾಸಿಯಾಗದ ಭಾರತದ ಕಿತ್ತಳೆ ನಗರಿ ಎಂಬ ಖ್ಯಾತಿ ಪಡೆದಿರುವ ವಿದರ್ಭ ಭಾಗದ ಕೇಂದ್ರ ಸ್ಥಾನ ನಾಗ್ಪುರದಲ್ಲಿ ಮೊಘಲ್‌ ಚಕ್ರವರ್ತಿ ಔರಂಗಾಜೇಬ್‌ನ ಸಮಾಧಿ ತೆರುವ ವಿಚಾರವಾಗಿ ಹಳೆಯ ವಸತಿಗೃಹಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆದ ಒಂದು ದಿನದ ನಂತರ ಸುಮಾರು 65 ಗಲಭೆಕೋರರನ್ನು ಬಂಧಿಸಲಾಗಿದೆ. ನಾಗ್ಪುರ ನಗರದ 11 ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನಗಳು ನಡೆದಿವೆ. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಪರಿಸ್ಥಿತಿ ಸಹಜಸ್ಥಿತಿಗೆ ಬರಲು ಒಂದೆರಡು ದಿನಗಳು ಬೇಕಾಗಬಹುದು. ಹಿಂಸಾಚಾರ ಪೀಡಿತ ನಾಗ್ಪುರ ನಗರದಲ್ಲಿ ಭಾರೀ ಭದ್ರತೆ ಹಾಕಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಪಹರೆ ಬಿಗಿಗೊಂಡಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಅಡಿಯಲ್ಲಿ ಪೊಲೀಸ್ ಆಯುಕ್ತ (ಸಿಪಿ) ರವೀಂದರ್ ಕುಮಾರ್ ಸಿಂಘಾಲ್ ಹೊರಡಿಸಿದ ಕರ್ಫ್ಯೂ ಆದೇಶವು ಮುಂದಿ...