ಭಾರತ, ಮಾರ್ಚ್ 18 -- Nagpur Violence: ಔರಂಗಜೇಬ್ ಸಮಾಧಿ ವಿವಾದವು ನಾಗ್ಪುರ್‌ದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳಗಳಂತಹ ಹಿಂದೂ ಸಂಘಟನೆಗಳು ಸಮಾಧಿ ತೆರವುಗೊಳಿಸುವ ಬಗ್ಗೆ ಪ್ರತಿಭಟನೆಗಳನ್ನು ಮಾಡುತ್ತಲೇ ಇದ್ದವು. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಈ ಸಂಘಟನೆಗಳು ಸೋಮವಾರ (ಮಾರ್ಚ್ 17) ಬೆಳಿಗ್ಗೆ ಬೃಹತ್‌ ಪ್ರತಿಭಟನೆ ನಡೆಸಿದವು. ಪ್ರತಿಭಟನೆಯ ಸಂದರ್ಭ ಔರಂಗಜೇಬ್ ಪ್ರತಿಮೆಯನ್ನು ಸಾಂಕೇತಿಕವಾಗಿ ಸುಟ್ಟು ಹಾಕಲಾಗಿತ್ತು. ನಂತರ ಇಲ್ಲಿ ಹಿಂಸಾಚಾರ ಆರಂಭಗೊಂಡಿತು. ಕೆಲವೆಡೆ ಬೆಂಕಿ ಹಚ್ಚಲಾಯಿತು. ಈ ಹಿಂಸಾಚಾರದಲ್ಲಿ ಪ್ರತಿಭಟನಾಕಾರರು ಸೇರಿದಂತೆ ಪೊಲೀಸರು ಕೂಡ ಗಾಯಗೊಂಡಿದ್ದಾರೆ. ವಾಹನಗಳು ಹಾಗೂ ಅಂಗಡಿ ಮಳಿಗೆಗಳಿಗೆ ಬೆಂಕಿ ಹಚ್ಚಲಾಗಿದೆ.

ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಔರಂಗಜೇಬನ ಸಮಾಧಿಯನ್ನು ಸಾಂಕೇತಿಕವಾಗಿ ಸುಡುವ ಸಮಯದಲ್ಲಿ ಬಳಸಿದ್ದ ಹಾಳೆಗಳು ವಿವಾದ ಸೃಷ್ಟಿಸಿದವು. ಯಾಕೆಂದರೆ ಮುಸ್ಲಿಂ ಸಮುದಾಯಗಳು ಈ ಹಾಳೆಗಳಲ್ಲಿ ತಮ್ಮ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಬರೆ...