ಭಾರತ, ಜನವರಿ 29 -- Naa Ninna Bidalaare Serial January 28 2025 Episode: ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಸೋಮವಾರದಿಂದ ಪ್ರಸಾರ ಆರಂಭಿಸಿದೆ. ಕಿರುತೆರೆ ವೀಕ್ಷಕರಿಗೆ ಹಾರರ್‌ ಥ್ರಿಲ್ಲರ್‌ ಕಥೆ ಹೇಳುವ ಮೂಲಕ ಹೊಸ ಕಥೆಯ ಜತೆಗೆ ಆಗಮಿಸಿದೆ ಜೀ ಕನ್ನಡ ವಾಹಿನಿ. ಈ ಹಿಂದೆ ಕಿರುತೆರೆಯಲ್ಲಿ ಗುರುತಿಸಿಕೊಂಡ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿದೆ. ಪಾರು ಸೀರಿಯಲ್‌ ಮೂಲಕ ಮನೆ ಮಾತಾದ ನಟ ಶರತ್‌ ಪದ್ಮನಾಭ್, ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲೂ ಶರತ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.‌ ನಟಿ ನೀತಾ ಅಶೋಕ್ ಕಿರುತೆರೆಗೆ ಮರಳಿದರೆ, ಮತ್ತೋರ್ವ ನಾಯಕ ನಟಿಯಾಗಿ ರಿಷಿಕಾ ನಟಿಸುತ್ತಿದ್ದಾರೆ. ಚೂಟಿ ಪುಟಾಣಿ ಮಹಿತಾಗಿಲ್ಲಿ, ಹಿತಾ ಪಾತ್ರ ಸಿಕ್ಕಿದೆ.

ಕನ್ನಡ ಸಿನಿಮಾ ಮಾತ್ರವದಲ್ಲದೆ ರಂಗಭೂಮಿಯಲ್ಲಿಯೂ ಹೆಸರು ಮಾಡಿರುವ ಹಿರಿಯ ನಟ ಬಾಬು ಹಿರಣ್ಣಯ್ಯ ಮತ್ತು ನಟಿ ವೀಣಾ ಸುಂದರ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಮಾಯಾ ಹೆಸರಿನ ಪಾತ್ರದಲ್ಲಿ ಖಳನಾಯಕಿಯಾಗಿ ರುಹಾನಿ ಶೆಟ್ಟಿ ಎಂಟ್ರಿಕೊಟ್ಟಿದ್ದಾರೆ. ಜಯದುರ...