ಭಾರತ, ಫೆಬ್ರವರಿ 24 -- ಮೈಸೂರು ಎಂದರೆ ಬರೀ ನಗರವಲ್ಲ. ಅದು ಇತಿಹಾಸದ ಊರು. ಹಸಿರಿನ ನಗರಿ. ಎಲ್ಲೆಡೆ ನೆಟ್ಟಿರುವ ಸಸಿಗಳು ರಸ್ತೆಗಳಿಗೆ ಹಸಿರು ತೋರಣವಾಗಿ ಕಂಡು ಬರುತ್ತವೆ. ವಸಂತಾಗಮನದ ಮುನ್ನ ಹರಿಸು ವಾತಾವರಣ ಹೀಗಿದೆ.

ಮೈಸೂರಿನ ವಿವಿಧ ಬಡಾವಣೆಗಳಲ್ಲಿ ನೀವು ಸುತ್ತು ಹಾಕಿಕೊಂಡು ಬಂದರೆ ಇಂತಹ ವಾತಾವರಣ ನಿಜಕ್ಕೂ ಮುದ ನೀಡುತ್ತದೆ.

ಅದರಲ್ಲೂ ಮನೆಯ ಮುಂದಿನ ಮರಗಳು ಬಗೆಬಗೆಯ ಹೂವುಗಳನ್ನು ಬಿಟ್ಟು ಮನೆಯ ಛಾವಣಿಯವನ್ನು ಹೂವಿನಿಂದ ಅಲಂಕರಿಸಿವೆ.

ಮನೆಯ ಛಾವಣಿ ಮಾತ್ರವಲ್ಲ. ರಸ್ತೆಗಳು ಬಗೆಬಗೆಯ ಹೂವುಗಳಿಂದ ಸ್ವಾಗತಿಸುತ್ತವೆ. ಹೂವು ಚಲುವೆಲ್ಲಾ ನಂದೆಂದಿತು ಎಂಬ ಹಾಡನ್ನು ನೆನಪಿಸುತ್ತವೆ.

ಮೈಸೂರಿನಲ್ಲಿ ಮುಗಿಲೆತ್ತರಕ್ಕೆ ಏರಿದ ಹಲವು ಟಬೂಬಿಯಾ ಗಿಡಗಳು ಹಳದಿಮಯವಾಗಿ ಗಮನಸೆಳೆದಿವೆ.

ಎಲ್ಲೋ ಮಳೆಯಾಗಿದೆ ಎಂದು ಹಾಡಿದರೆ ಮೈಸೂರಿನ ಗಿಡಗಳಲ್ಲಿ ಹಳದಿ ಹೂವುಗಳ ದರ್ಶನವಾಗುತ್ತದೆ

ಮೈಸೂರಿನ ಅರಮನೆ ಅಂಗಳದಲ್ಲಿ ಗುಲಾಬಿ ಬಣ್ಣದ ಹೂವುಗಳ ಲೋಕ. ಹಸಿರ ಹಿನ್ನೆಲೆಗೆ ಹೂವುಗಳ ಸೊಬಗು ಸವಿಯುವುದೇ ಚಂದ.

ಮೈಸೂರಿನ ಕುಕ್ಕರಹಳ್ಳಿ ...