ಭಾರತ, ಫೆಬ್ರವರಿ 12 -- ಮೈಸೂರು: ದೆಹಲಿ ವಿಧಾನಸಭೆ ಚುನಾವಣೆ ಬಳಿಕ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ವ್ಯಕ್ತಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುವ ವೇಳೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಮಾಡಿ ಪೊಲೀಸರನ್ನು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಸೋಮವಾರ ರಾತ್ರಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಒಂದು ಕೋಮಿನ ಜನರು ಕಲ್ಲುತೂರಾಟ ನಡೆಸಿದ್ದರು. ಈ ಪ್ರಕರಣದಲ್ಲಿ ಹಲವು ಮಂದಿ ಪೊಲೀಸರಿಗೂ ಗಾಯವಾಗಿತ್ತು. ಎರಡು ದಿನದಿಂದಲೂ ಮೈಸೂರು ನಗರ ಪೊಲೀಸರು ವಿಡಿಯೋಗಳನ್ನು ಆಧರಿಸಿ ಕಲ್ಲು ಎಸೆದವರು ಹಾಗೂ ದೊಂಬಿಗೆ ಮುಂದಾದವರ ಪಟ್ಟಿ ಮಾಡಿ ಅವರ ವಿರುದ್ದ ಎಫ್‌ಐಆರ್‌ ದಾಖಲಿಸಿದ್ದರು. ಈಗ ಅವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಕಲ್ಲು ತೂರಾಟ ಘಟನೆಯ ತನಿಖೆಯನ್ನು ಕೈಗೊಂಡ ಮೈಸೂರು ಪೊಲೀಸರು ಕಲ್ಲುತೂರಾಟ ನಡೆಸಿದ 15ಕ್ಕೂ ಹೆಚ್ಚು ಮಂದಿಯನ್ನು ವಷಕ್ಕೆ ಪಡೆದು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಈ ಘಟನೆಯ...