Mysuru, ಫೆಬ್ರವರಿ 8 -- ಮೈಸೂರು: ಸಹಜ ಸಮೃದ್ದ ಸಂಸ್ಥೆ ನಮ್ಮಲ್ಲಿ ಸಿಗುವ ರುಚಿಕರ ಹಾಗೂ ಆರೋಗ್ಯಕರ ಗೆಣಸುಗಳ ಬಳಕೆ, ಅದರ ಮಹತ್ವ ಹಾಗೂ ವಿಶೇಷವನ್ನು ತಿಳಿಸಿಕೊಡುವ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಿಯಮಿತವಾಗಿ ಆಯೋಜಿಸುತ್ತಾ ಬರುತ್ತಿದೆ. ಎರಡು ವಾರದ ಹಿಂದೆ ಹುಬ್ಬಳ್ಳಿಯಲ್ಲಿ ಗೆಡ್ಡೆ ಗೆಣಸು ಮೇಳ ಯಶಸ್ವಿಯಾಗಿ ಮುಕ್ತಾಯಗೊಂಡ ಬೆನ್ನಲ್ಲೇ ಮೈಸೂರಿನಲ್ಲೂ ಇಂತಹದ್ದೇ ಮೇಳವನ್ನು ಆಯೋಜಿಸಿದೆ. ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ 2025ರ ಫೆಬ್ರವರಿ 8 ಹಾಗೂ 9ರ ವಾರಾಂತ್ಯದಂದು ಈ ಮೇಳ ರೂಪಿಸಲಾಗಿದೆ. ಸಹಜ ಸಮೃದ್ದದಿಂದ ಮೈಸೂರಿನಲ್ಲಿ ಹಲವು ಬಾರಿ ವಿಭಿನ್ನ ಮೇಳಗಳನ್ನು ಆಯೋಜಿಸಲಾಗಿದ್ದರೂ ಈ ಬಾರಿ ಬಗೆಬಗೆಯ ಬಣ್ಣದ ಗೆಡ್ಡೆಗಳನ್ನು ನೋಡಬಹುದು. ಅಷ್ಟೇ ಅಲ್ಲದೇ ಗೆಡ್ಡೆ ಗೆಣಸುಗಳ ಅಡುಗೆಗಳನ್ನೂ ಸವಿಯಲು ಅವಕಾಶವಿದೆ.

ಶನಿವಾರ ಮೈಸೂರಿನಲ್ಲಿ ಆರಂಭವಾಗಲಿರುವ ' ಗೆಡ್ಡೆ ಗೆಣಸು ಮೇಳ' ಸಂಪೂರ್ಣ ಕಲರ್ ಪುಲ್ ಆಗಿರಲಿದೆ. ಏಕೆಂದರೆ ಈಶಾನ್ಯ ಭಾಗದ ರಾಜ್ಯವಾದ ಅಸ್ಸಾಂನಿಂದ ಮೇಳಕ್ಕಾಗೇ ನೀಲಿ ನವಿಲುಕೋಲ್ , ಬಣ್ಣ ಬಣ್ಣದ ಕ್ಯಾ...