Mysuru, ಫೆಬ್ರವರಿ 14 -- ಮೈಸೂರು: ಪೊಲೀಸ್‌ ಠಾಣೆಗಳ ಮೇಲೆ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವುದು. ನಷ್ಟ ಉಂಟು ಮಾಡುವವರಿಂದಲೇ ವೆಚ್ಚ ಭರಿಸುವ ವ್ಯವಸ್ಥೆ ಉತ್ತರಪ್ರದೇಶದಲ್ಲಿ ಇರಬಹುದು. ಆದರೆ ಕರ್ನಾಟಕದಲ್ಲಿ ಅಂತಹ ಮಾದರಿ ಕ್ರಮ ಬೇಡ ಎಂದು ಕರ್ನಾಟಕದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಮೈಸೂರಿನಲ್ಲಿ ಉದಯಗಿರಿ ಠಾಣೆಯಲ್ಲಿ ನಡೆದ ಕಲ್ಲುತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ಶುಕ್ರವಾರ ಠಾಣೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ ಬಳಿಕ ಸುದ್ದಿಗಾರರು ಕೇಳಿದ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಏಕಿಲ್ಲ,ನಷ್ಟ ಮಾಡಿದವರಿಂದಲೇ ನಷ್ಟ ಭರಿಸುವ ಪ್ರಸ್ತಾವವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಉತ್ತರಪ್ರದೇಶ ಮಾದರಿಯ ಕ್ರಮ ಕರ್ನಾಟಕಕ್ಕೆ ಸದ್ಯಕ್ಕೆ ಅಗತ್ಯ ಇಲ್ಲವೆಂದು ಸ್ಪಷ್ಟವಾಗಿಯೇ ಹೇಳಿದರು.

ಇದರ ಬಗ್ಗೆ ಅನೇಕ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಉತ್ತರಪ್ರದೇಶದಲ್ಲಿ ಬುಲ್ಡೋಜರ್ ತೆಗೆದುಕೊಂಡು ಹೋಗುವ ಕೆಲಸ ಆಗುತ್ತದೆ. ಈಗ ಅಂತಹ ಪರಿಸ್ಥಿತಿ ...