Mysuru, ಮಾರ್ಚ್ 20 -- ಶತಮಾನದ ಹಿನ್ನೆಲೆಯಿರುವ ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲಗಳ ಸಂಕೀರ್ಣದಲ್ಲಿರುವ ಶ್ರೀ ಮಹಾಬಲೇಶ್ವರ ರಥೋತ್ಸವ ಜರುಗಿತು.

ಬೆಳಿಗ್ಗೆಯಿಂದಲೇ ಚಾಮುಂಡಿಬೆಟ್ಟದಲ್ಲಿ ಶ್ರೀ ಮಹಾಬಲೇಶ್ವರ ಸ್ವಾಮೀಗೆ ವಿಶೇಷ ಪೂಜೆಗಳು ನೆರವೇರಿದವು.

ಈ ವೇಳೆ ರಥದ ಸುತ್ತಲೂ ಮೆರವಣಿಗೆ ನಡೆದಾಗ ಚಾಮುಂಡೇಶ್ವರಿ ದೇಗುಲಗಳ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಮಣೆಗಾರ್‌ ಪ್ರಸಾದ್‌, ನಾಗರಾಜು ಮತ್ತಿತರರು ಭಾಗಿಯಾದರು.

ಚಾಮುಂಡಿಬೆಟ್ಟದಲ್ಲಿ ರಥೋತ್ಸವಕ್ಕೂ ಮುನ್ನ ಉತ್ಸವಮೂರ್ತಿಯನ್ನು ದೇಗುಲದ ಅರ್ಚಕರು ಹೊತ್ತು ತಂದರು.

ಉತ್ಸವ ಮೂರ್ತಿಯನ್ನು ತಂದು ರಥದಲ್ಲಿ ಇರಿಸಿ ಭಕ್ತರ ಸಮ್ಮುಖದಲ್ಲಿ ಚಾಮುಂಡಿಬೆಟ್ಟದಲ್ಲಿ ರಥ ಎಳೆಯಲಾಯಿತು.

ಶ್ರೀ ಮಹಾಬಲೇಶ್ವರ ದೇವಾಲಯವನ್ನು ಹೊಯ್ಸಳ ಆಳ್ವಿಕೆಯ ಆರಂಭಕ್ಕೂ ಮುನ್ನ ನಿರ್ಮಿಸಲಾಗಿತ್ತು. ಶಾಸನಗಳ ಪುರಾವೆಗಳು ಈ ಪ್ರದೇಶವನ್ನು ಮಾಬಲ ಅಥವಾ ಮಾಬಲ ತೀರ್ಥ ಎಂದು ಸೂಚಿಸುತ್ತವೆ ಮತ್ತು ಹೊಯ್ಸಳ ಎಂದು ಹೇಳುತ್ತದೆ. ರಾಜ ವಿಷ್ಣುವರ್ಧನನು ಕ್ರಿ.ಶ. 1128 ರಲ್ಲಿ ಈ ದೇವಾ...