ಭಾರತ, ಮಾರ್ಚ್ 3 -- Mysore Crime: ಹಲವು ವರ್ಷದಿಂದ ತೋಟದ ಮನೆಯಲ್ಲಿಯೇ ವಾಸವಾಗಿದ್ದ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಾಂಗ್ರೆಸ್‌ ಮುಖಂಡರೊಬ್ಬರ ವೃದ್ದ ದಂಪತಿಗಳನ್ನು ಸೋಮವಾರ ಭೀಕರವಾಗಿ ಕೊಲೆ ಮಾಡಲಾಗಿದೆ. ಹುಣಸೂರು ತಾಲ್ಲೂಕು ನಾಡಪ್ಪನಹಳ್ಳಿ ಹಾಗೂ ಗೌರಿಪುರ ಗ್ರಾಮದ ನಡುವೆ ಇರುವ ತೋಟದ ಮನೆಯಲ್ಲಿ ಕೊಲೆ ನಡೆದಿದೆ. ಮನೆಯಲ್ಲಿಯೇ ಇಬ್ಬರೇ ಇರುವಾಗ ಹೊಂಚು ಹಾಕಿ ಕೊಲೆ ಮಾಡಿ ಪರಾರಿಯಾಗಿರುವುದು ಕಂಡುಬಂದಿದೆ. ಸ್ಥಳಕ್ಕೆ ಮೈಸೂರು ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳು, ಶ್ವಾನದಳದ ತಂಡ ಆಗಮಿಸಿವೆ. ಕೊಲೆಗೆ ಕಾರಣವೇನು, ಹಣ, ಆಭರಣ ದೋಚಲಾಗಿದೆಯೇ ಎನ್ನುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ತೋಟದ ಮನೆಯಲ್ಲಿ ಈ ಭಾಗದಲ್ಲಿ ಈ ರೀತಿಯಲ್ಲಿ ಕೊಲೆಯಾಗಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಆಗಿರುವುದರಿಂದ ಈ ಭಾಗದ ಜನ ಬೆಚ್ಚಿ ಬಿದ್ದಿದ್ದಾರೆ.

ಬಿಳಿಕೆರೆ ಹೋಬಳಿಯ ನಾಡಪ್ಪನಹಳ್ಳಿ ಗ್ರಾಮದ ರಂಗಸ್ವಾಮಿಗೌಡ(65) ಇವರ ಪತ್ನಿ ಶಾಂತಮ್ಮ (52)ಮೃತಪಟ್ಟವರು.

ಸೋಮವಾರ ಸಂಜೆ ರಂಗಸಾಮಿಗೌಡರ ಪುತ...