Delhi, ಮಾರ್ಚ್ 28 -- Myanmar earthquake: ಭಾರತದ ಈಶಾನ್ಯ ರಾಜ್ಯಗಳಿಗೆ ಹೊಂದಿಕೊಂಡಂತೆ ಇರುವ ಮ್ಯಾನ್ಮಾರ್‌ ದೇಶದಲ್ಲಿ ಶುಕ್ರವಾರ ಭಾರೀ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದೆ. ಈವರೆಗೂ ಯಾವುದೇ ಪ್ರಾಣ ಹಾನಿಯಾದ ವರದಿಯಿಲ್ಲ. ಆದರೆ ಕಟ್ಟಡಗಳು ಕುಸಿತ ಕಂಡು ಅವಶೇಷಗಳಡಿ ಹಲವರು ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ಮ್ಯಾನ್ಮಾರ್‌ನಲ್ಲಿ ಬೆಳಿಗ್ಗೆಯಿಂದಲೂ ತ್ವರಿತಗತಿಯಲ್ಲಿ ಸಾಗಿದೆ. ಶುಕ್ರವಾರ ಮ್ಯಾನ್ಮಾರ್ ಜತೆಗೆ ಥೈಲ್ಯಾಂಡ್‌ನಲ್ಲಿ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದು, ಅದರ ಪರಿಣಾಮ ಭಾರತದ ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ಮೇಘಾಲಯದಲ್ಲಿಯೂ ಅನುಭವಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (IMD), ಮಣಿಪುರ ಕೇಂದ್ರ, ಭೂ ವಿಜ್ಞಾನ ಸಚಿವಾಲಯದ ಪ್ರಾಥಮಿಕ ಸ್ಥಳ ವರದಿಯ ಪ್ರಕಾರ, ಮೊದಲ 7.2 ತೀವ್ರತೆಯ ಭೂಕಂಪ ಬೆಳಿಗ್ಗೆ 11:50 ರ ಸುಮಾರಿಗೆ ಸಂಭವಿಸಿದರೆ, ಎರಡನೇ 7 ತೀವ್ರತೆಯ ಭೂಕಂಪ ಮಧ್ಯಾಹ್ನ 12:02 ರ ಸುಮಾರಿಗೆ ಸಂಭವಿಸಿದೆ.

ಆದಾಗ್ಯೂ, ಮ್ಯಾನ್ಮಾರ್‌ನೊಂದಿಗೆ 390 ಕ...