ಭಾರತ, ಏಪ್ರಿಲ್ 26 -- ಮಾಂಸಾಹಾರಿಗಳಿಗೆ ಚಿಕನ್‌ನಷ್ಟೇ ಮಟನ್‌ ಕೂಡ ಫೇವರಿಟ್‌. ಮಟನ್‌ ದೇಹಕ್ಕೆ ತಂಪು ಎಂಬ ಮಾತು ಇದೆ. ಆದ್ರೆ ಮಟನ್‌ ತಿನ್ನೋದ್ರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚುತ್ತೆ ಎಂಬ ಭಯ ಹಲವರಿಗಿದೆ. ಕೊಲೆಸ್ಟ್ರಾಲ್‌ ಹೆಚ್ಚುವುದರಿಂದ ಹೃದ್ರೋಗ ಸೇರಿದಂತೆ ಹಲವು ಅಪಾಯಗಳು ಎದುರಾಗಬಹುದು. ಕೊಲೆಸ್ಟ್ರಾಲ್ ಎನ್ನುವುದು ನಮ್ಮ ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಮೇಣದಂತಹ ವಸ್ತುವಾಗಿದೆ. ಇದು ಜೀರ್ಣಕ್ರಿಯೆಗೆ ಸಹಕರಿಸುವ ಹಾರ್ಮೋನುಗಳು, ವಿಟಮಿನ್‌ ಡಿ ಹಾಗೂ ಪಿತ್ತರಸ ಲವಣಗಳನ್ನು ಉತ್ಪಾದಿಸಲು ಅವಶ್ಯಕ. ನಮ್ಮ ದೇಹಕ್ಕೆ ದಿನಕ್ಕೆ ಸುಮಾರು 2,000 ಮಿಲಿಗ್ರಾಂನಷ್ಟು ಕೊಲೆಸ್ಟ್ರಾಲ್ ಅಗತ್ಯವಿದೆ. ತಜ್ಞರ ಪ್ರಕಾರ ಕೊಲೆಸ್ಟ್ರಾಲ್ ಮತ್ತು ಕೊಬ್ಬು ಬೇರೆ ಬೇರೆ.

ನಾವು ಮಟನ್ ಅಂದರೆ ಕುರಿ ಮಾಂಸ, ಗೋಮಾಂಸ, ಹಂದಿ ಮಾಂಸವನ್ನು ಕೆಂಪು ಮಾಂಸ ಅಥವಾ ರೆಡ್‌ ಮೀಟ್‌ ಎಂದು ಕರೆಯುತ್ತೇವೆ. ಮೀನು ಮತ್ತು ಕೋಳಿ ಬಿಳಿ ಮಾಂಸವಾಗಿದೆ.

ಭಾರತದಲ್ಲಿ ಹೆಚ್ಚಿನವರಲ್ಲಿ ಟ್ರೈಗ್ಲಿಸರೈಡ್ ಎಂಬ ಅಧಿಕ ಕೊಲೆಸ್ಟ್ರಾಲ್ ಅಂಶವಿರುತ್ತದೆ. ಈ ...