ಭಾರತ, ಮಾರ್ಚ್ 18 -- Double Decker Bus for Munnar: ದೇವರನಾಡು ಎಂದೇ ಖ್ಯಾತಿ ಗಳಿಸಿರುವ ಕೇರಳ ಪ್ರವಾಸಿಗರಿಗೆ ಸ್ವರ್ಗ. ಅದರಲ್ಲೂ ಮುನ್ನಾರ್ ಗಿರಿಧಾಮಗಳು ಕೇವಲ ಭಾರತೀಯರನ್ನು ಮಾತ್ರವಲ್ಲ ವಿದೇಶಿಗರನ್ನೂ ಸೆಳೆಯುತ್ತಿದೆ. ಇಲ್ಲಿನ ಸುಂದರ ಕಾಫಿ ತೋಟಗಳು, ಮಂಜಿನಿಂದ ಆವೃತವಾಗಿರುವ ಪ್ರಶಾಂತ ಪರಿಸರ, ಹಸಿರು ಹಾಸಿದಂತಿರುವ ಭೂ ದೃಶ್ಯಗಳು ಪ್ರವಾಸಿಗರಿಗರಿಗೆ ಸ್ವರ್ಗಕ್ಕೆ ಬಂದಂತಹ ಅನುಭವ ಕೊಡುವುದು ಸುಳ್ಳಲ್ಲ. ಇದೀಗ ಕೇರಳ ಸಾರಿಗೆ ಮುನ್ನಾರ್‌ನಲ್ಲಿ ಡಬ್ಬಲ್ ಡೆಕ್ಕರ್ ಬಸ್‌ ಪರಿಚಯಿಸುವ ಮೂಲಕ ಪ್ರವಾಸೋದ್ಯಮಕ್ಕೆ ಇನ್ನೊಂದು ಗರಿ ಮೂಡುವಂತೆ ಮಾಡಿದೆ.

ಮುನ್ನಾರ್ ಬಸ್ ನಿಲ್ದಾಣ ಹಾಗೂ ಅನೈರಂಗಲ್‌ ಅಣೆಕಟ್ಟು ಮಾರ್ಗದಲ್ಲಿ ಈ ಬಸ್ ಸಂಚರಿಸುತ್ತಿದೆ. ಈಗಾಗಲೇ ಸಾವಿರಾರು ಮಂದಿ ಈ ಬಸ್‌ನಲ್ಲಿ ಪ್ರಯಾಣ ಮಾಡಿದ್ದು, ಇದರಿಂದ ಕೇರಳ ಸಾರಿಗೆಗೆ ಉತ್ತ ಲಾಭವಾಗುತ್ತಿದೆ. ಬಜೆಟ್ ಪ್ರವಾಸೋದ್ಯಮಕ್ಕೆ ಒತ್ತು ನೀಡಿರುವ ಈ ಯೋಜನೆಯು ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಇಲೆಕ್ಟ್ರಿಕ್ ಬಸ್ ಬಿಡುವ ಬಗ್ಗೆಯೂ ಚಿಂತನೆ ನಡ...