Bangalore, ಜನವರಿ 31 -- ಆನ್‌ಲೈನ್‌ ವಂಚಕರಿಗೆ ಹಣಕಾಸು ವಂಚನೆ ಮಾಡಲು ನಕಲಿ ಬ್ಯಾಂಕ್‌ ಖಾತೆಗಳ ಬೇಕಿರುತ್ತವೆ. ಅಮಾಯಕರು, ಅನಕ್ಷರಸ್ಥರ ಹೆಸರಿನಲ್ಲಿ ನಕಲಿ ಬ್ಯಾಂಕ್‌ ಖಾತೆಗಳನ್ನು ರಚಿಸಿ, ಆ ಬ್ಯಾಂಕ್‌ ಖಾತೆಗಳನ್ನು ವಂಚಕರಿಗೆ ನೀಡುವ ಜಾಲ ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿ ಸಕ್ರೀಯವಾಗಿವೆ. ಆನ್‌ಲೈನ್‌ ವಂಚಕರಿಂದ ನೀವು ಹಣ ಕಳೆದುಕೊಂಡರೂ ಪೊಲೀಸರಿಗೆ ನಿಮ್ಮ ಹಣವನ್ನು ವಾಪಸ್‌ ಪಡೆಯಲು ಸಾಧ್ಯವಾಗದೆ ಇರಲು ಇಂತಹ ನಕಲಿ ಖಾತೆಗಳು ಕಾರಣವಾಗಿವೆ. ಇದೇ ರೀತಿ ಕೋಟ್ಯಾಂತರ ರೂಪಾಯಿ ಮನಿ ಲ್ಯಾಂಡರಿಂಗ್‌ಗೂ ಇಂತಹ ನಕಲಿ ಖಾತೆಗಳನ್ನು ಬಳಸಿಕೊಳ್ಳಲಾಗುತ್ತದೆ. ಇದೀಗ ಹೈದರಾಬಾದ್‌ ಪೊಲೀಸರು ಇಂತಹ ನಕಲಿ ಖಾತೆ ಜಾಲವೊಂದನ್ನು ಬೇಧಿಸಿದ್ದಾರೆ. ಬೆಂಗಳೂರಿನ ಇಬ್ಬರು ಹಿರಿಯ ಬ್ಯಾಂಕ್‌ ಅಧಿಕಾರಿಗಳೂ ಈ ಜಾಲದಲ್ಲಿ ಸಿಕ್ಕ ಬಿದ್ದಿದ್ದಾರೆ. ಸೈಬರ್ ವಂಚಕರು ಮ್ಯೂಲ್ ಖಾತೆಗಳನ್ನು ತೆರೆಯಲು ಸಹಾಯ ಮಾಡಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.

ಈ ರೀತಿ ವಂಚಕರಿಗೆ ನಕಲಿ, ಮ್ಯೂಲ್‌, ಹೇಸರಗತ್ತೆ ಖಾತೆಗಳನ್ನು ತೆರೆಯಲು ಭಾರಿ...