Bengaluru, ಏಪ್ರಿಲ್ 14 -- Muddhu Sose Serial: ಸಾಲು ಸಾಲು ಹೊಸ ಸೀರಿಯಲ್‌ಗಳನ್ನು ಕರುನಾಡ ಪ್ರೇಕ್ಷಕರಿಗೆ ನೀಡುತ್ತಿದೆ ಕಲರ್ಸ್‌ ಕನ್ನಡ ವಾಹಿನಿ. ಬಿಗ್‌ ಬಾಸ್‌ ಮುಗಿದ ಬಳಿಕ, ವಧು ಮತ್ತು ಯಜಮಾನ ಮೂಲಕ ಎರಡು ಸೀರಿಯಲ್‌ಗಳನ್ನು ಪರಿಚಯಿಸಿದ್ದ ಕಲರ್ಸ್‌, ಅದಾದ ಮೇಲೆ ಇತ್ತೀಚೆಗಷ್ಟೇ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ ಜತೆ ಆಗಮಿಸಿತ್ತು. ಇಂತಿಪ್ಪ ಮೂರು ಸೀರಿಯಲ್‌ಗಳ ಬಳಿಕ ಇದೀಗ ಈ ವರ್ಷದ ನಾಲ್ಕನೇ ತಿಂಗಳಷ್ಟೊತ್ತಿಗೆ ನಾಲ್ಕನೇ ಧಾರಾವಾಹಿಯನ್ನು ಹೊತ್ತು ತರುತ್ತಿದೆ. ಅದುವೇ ʻಮುದ್ದು ಸೊಸೆʼ. ಇಂದಿನಿಂದ ರಾತ್ರಿ 7:30ಕ್ಕೆ ಕಲರ್ಸ್‌ ಕನ್ನಡದಲ್ಲಿ ʻಮುದ್ದು ಸೊಸೆʼ ಪ್ರಸಾರವಾಗಲಿದೆ. ಜೀ ಕನ್ನಡದ ಅಣ್ಣಯ್ಯನ ಎದುರು ಈ ಸೀರಿಯಲ್‌ ಕಣಕ್ಕಿಳಿಯಲಿದೆ.

ಬಿಗ್‌ ಬಾಸ್‌ ಮೂಲಕ ಗಮನ ಸೆಳೆದ ತ್ರಿವಿಕ್ರಮ್ ʻಮುದ್ದು ಸೊಸೆʼ‌ ಸೀರಿಯಲ್‌ ಮೂಲಕ ನಾಯಕರಾಗಿ ಕಿರುತೆರೆ ಪ್ರವೇಶಿಸಿದ್ದಾರೆ. ನಾಯಕಿಯಾಗಿ ಪ್ರತಿಮಾ ಠಾಕೂರ್ ಕಾಣಿಸಿಕೊಂಡರೆ, ಇನ್ನುಳಿದಂತೆ ಮುನಿ ಮತ್ತು ಹರಿಣಿ ಶ್ರೀಕಾಂತ್ ಮುಖ್ಯಭೂಮಿಕೆಯಲ್ಲಿದ್ದಾರೆ. ಚೆನ್ನಾಗಿ ಓದ...