Bangalore, ಮಾರ್ಚ್ 2 -- MSIL Chits: ಕರ್ನಾಟಕದಲ್ಲೂ ಸರ್ಕಾರದ ಸಂಸ್ಥೆಯಿಂದಲೇ ಚಿಟ್‌ ಫಂಡ್‌ ಆರಂಭಿಸಿ ಅದನ್ನು ಗ್ರಾಮೀಣ ಹಂತಕ್ಕೂ ವಿಸ್ತರಿಸುವ ಚಟುವಟಿಕೆ ನಡೆದಿವೆ. ಕೇರಳ,ತಮಿಳುನಾಡು ಮಾದರಿಯಲ್ಲಿ ಎಂ.ಎಸ್.ಐ.ಎಲ್ ಮೂಲಕ ಚಿಟಫಂಡ್ ವ್ಯವಸ್ಥೆ ಜಾರಿ ಮಾಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶಕ್ತಿ ತುಂಬಲು ಚಿಂತನೆ ನಡೆಸಲಾಗುತ್ತಿದೆ. ಕೇರಳದಲ್ಲಿ ಸುಮಾರು ರೂ. 25000 ಕೋ. ಗಿಂತಲೂ ಹೆಚ್ಚಿನ ವ್ಯವಹಾರ ನಡೆಯುತ್ತದೆ. ಅದೇ ರೀತಿ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲಿ ಎಂ.ಎಸ್.ಐ.ಎ ಮೂಲಕ ಚಿಟಫಂಡ್ ವ್ಯವಸ್ಥೆ ಜಾರಿ ಮಾಡುವ ಮೂಲಕ ಸ್ವಸಹಾಯ ಗುಂಪುಗಳಿಗೆ ಶಕ್ತಿ ತುಂಬಲು ಚಿಂತನೆ ನಡೆದಿದೆ. ಪಿಗ್ಮಿ ಏಜೆಂಟರ ರೀತಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಇದರಿಂದ ಉದ್ಯೋಗ ಸಿಗಲಿದೆ. ಇದರಿಂದ ಗೃಹಲಕ್ಷ್ಮಿ ಯೋಜನೆ ಹಣವೂ ಸದುಪಯೋಗವಾಗಲಿದೆ. ಸರಕಾರವೇ ಇದನ್ನು ನಡೆಸುವುದರಿಂದ ಜನರಿಗೆ ವಿಶ್ವಾಸ ಹೆಚ್ಚಲಿದ್ದು, ಸರಕಾರದ ಶ್ರೀರಕ್ಷೆಯೂ ಈ ಯೋಜನೆಗೆ ಇರಲಿದೆ. ಅಷ್ಟೇ ಅಲ್ಲ, ಹಣವೂ ಸುರಕ್ಷಿತವಾಗಿರುತ್ತದೆ ಎನ್ನುವ ನಂಬಿಕೆಯೂ ಇದೆ....