ಭಾರತ, ಫೆಬ್ರವರಿ 26 -- ದಿ ಗ್ರೇಟ್‌ ಇಂಡಿಯನ್‌ ಕಿಚನ್‌ ಎಂಬ ಮಲಯಾಳಂ ಸಿನಿಮಾದ ಹಿಂದಿ ರಿಮೇಕ್‌ "ಮಿಸೆಸ್‌" ಹಲವು ರೀತಿಯಲ್ಲಿ ಕಾಡುವ ಸಿನಿಮಾ. ಅನೇಕ ಪ್ರತಿಭಾನ್ವಿತ ಯುವತಿಯರು ಮಹಿಳೆಯರು ಮದುವೆಯಾದ ಬಳಿಕ ಅಡುಗೆ ಮನೆಗೆ ಸೀಮಿತರಾಗಿ ಬಿಡುತ್ತಾರೆ. ಉದ್ಯೋಗ ಮಾಡುವ ಅಥವಾ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮನೆಯಲ್ಲಿರುವ ಪುರುಷರು ಮದುವೆಯಾಗಿ ಬಂದ ಹೆಣ್ಣನ್ನು ನಿಧಾನವಾಗಿ ಹತ್ತಿಕ್ಕುತ್ತಾರೆ. ನಮಗಿಂತ ಈಕೆ ಪ್ರತಿಭೆಯಲ್ಲಿ ಮೇಲೆ ಇದ್ದರೂ ತಮ್ಮ ಮಾತು, ವರ್ತನೆಗಳ ಮೂಲಕ ಆಕೆಯನ್ನು ಕೆಳಕ್ಕೆ ತಳ್ಳಲು ಯತ್ನಿಸುತ್ತಾರೆ. ಮಿಸ್ಸೆಸ್‌ ಸಿನಿಮಾದಲ್ಲಿ ಮಾವ ತನ್ನ ಸೊಸೆಯನ್ನು "ಬೇಟಾ ಬೇಟಾ.. ಎಂದು ಮಗಳಂತೆ ಕರೆದರೂ" ಆತ ಈಕೆಯನ್ನು ಸೈಲೆಂಟ್‌ ಆಗಿ ಮನೆಯೊಳಗೆ ಬಂಧಿಸುತ್ತಾನೆ. ಹೆಂಡತಿಯ ಕನಸುಗಳಿಗೆ ಜೀವ ತುಂಬಬೇಕಿದ್ದ ಗಂಡನೂ ತನ್ನ ತಂದೆಯಂತೆ ವರ್ತಿಸುತ್ತಾನೆ. ಮಿಸ್ಸೆಸ್‌ ಸಿನಿಮಾದಲ್ಲಿ ಕಾಡುವ ಕೆಲವೊಂದು ಅಂಶಗಳನ್ನು ತಿಳಿಯೋಣ.

ಮಿಸ್ಸೆಸ್‌ ಹಿಂದಿ ಸಿನಿ...