ಭಾರತ, ಫೆಬ್ರವರಿ 21 -- Mrs Movie: ಫೆಬ್ರವರಿ 7 ರಂದು ZEE5 ನಲ್ಲಿ ಬಿಡುಗಡೆಯಾದ ಸಾನ್ಯ ಮಲ್ಹೋತ್ರಾ ಅಭಿನಯದ Mrs (ಶ್ರೀಮತಿ) ಸಿನಿಮಾ ಸಾಮಾಜಿಕವಾಗಿ ಸಾಕಷ್ಟು ಸದ್ದು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾದ ಬಗ್ಗೆ ಹಾಗೂ ಮದುವೆಯಾದ ಮಹಿಳೆಯರು ಅನುಭವಿಸುವ ಕಷ್ಟದ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿದೆ. ಸಾನ್ಯ ಮಲ್ಹೋತ್ರಾ ಅಭಿನಯಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾನ್ಯ ಅಭಿನಯದಿಂದಲೇ ಈ ಸಿನಿಮಾ ಪ್ರೇಕ್ಷಕರ ಮೇಲೆ ಇನ್ನಷ್ಟು ಪ್ರಭಾವ ಬೀರಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಸಾನ್ಯಾ ಮಾವನ ಪಾತ್ರದಲ್ಲಿ ಅಭಿನಯಿಸಿದ ನಟ ಸಾನ್ಯ ಮಲ್ಹೋತ್ರಾ ಬಳಿ ಕ್ಷಮೆ ಕೇಳಿದ್ದಾರಂತೆ.

ಮಲಯಾಳಂ ಚಿತ್ರ 'ದಿ ಗ್ರೇಟ್ ಇಂಡಿಯನ್ ಕಿಚನ್‌ನ' ರೀಮೇಕ್ ಮಾಡಿದ ಸಿನಿಮಾವೇ ಹಿಂದಿಯ Mrs. ಆದರೆ ಮೂಲ ಸಿನಿಮಾಗಿಂತಲೂ ಹೆಚ್ಚಿನ ಪ್ರಚಾರ ಹಾಗೂ ಪ್ರಶಂಸೆ ಎರಡನ್ನೂ ಸಹ ಈ ಸಿನಿಮಾ ಗಳಿಸಿತು. ಸಿನಿಮಾದಲ್ಲಿ ಕಥೆ ಮಾತ್ರವಲ್ಲ ಭಾಷೆ ಹಾಗೂ ಭಾವನೆ ಹಾಗೂ ಅಭಿನಯ ತುಂಬಾ ಮುಖ್ಯವಾಗುತ್ತದೆ ಎಂದು ಸಾಕಷ್ಟು ಜನ ಅಭಿಪ್ರಾಯಪ...