Bangalore, ಜನವರಿ 29 -- ರೆಡ್ಡಿಟ್‌ ತಾಣದ ಆಸ್ಕ್‌ ಬೆಂಗಳೂರು ವಿಭಾಗದಲ್ಲಿ ಇತ್ತೀಚೆಗೆ ಒಬ್ಬರು ಪ್ರಶ್ನೆಯೊಂದನ್ನು ಕೇಳಿದ್ದಾರೆ. "ನಾನು ಬೆಂಗಳೂರಿಗೆ ಬಂದು ಸುಮಾರು ಏಳು ವರ್ಷಗಳಾಗಿದೆ. ದಿನದಿಂದ ದಿನಕ್ಕೆ ಬೆಂಗಳೂರು ದುಬಾರಿಯಾಗುತ್ತಿದೆ. ಮನೆ ಬಾಡಿಗೆ, ನೀರಿನ ಬಿಲ್‌, ಇಂಟರ್‌ನೆಟ್‌ ಬಿಲ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಇಎಂಐ ಇತ್ಯಾದಿಗಳನ್ನು ನಿರ್ವಹಣೆ ಮಾಡುವುದೇ ದುಸ್ತರವಾಗಿದೆ. ಕೆಲವೊಮ್ಮೆ ಅನಗತ್ಯ ವಸ್ತುಗಳನ್ನು ಖರೀದಿಸುವ ಒತ್ತಡವೂ ಇದೆ. ಬೆಂಗಳೂರಿನಲ್ಲಿ ಹಣ ಉಳಿಸಲು ಏನಾದರೂ ಸಲಹೆ ಇರುವುದೇ? ನನ್ನ ಬದುಕಿನ ಹಣಕಾಸು ಸ್ಥಿತಿ ದುಸ್ಥಿತಿಗೆ ತಲುಪಿದೆ" ಎಂದು ರೆಡ್ಡಿಟ್‌ನಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ಸಾಕಷ್ಟು ಜನರು ಉತ್ತರ ನೀಡಿದ್ದಾರೆ. ಈ ಉತ್ತರ ಹಣ ಉಳಿತಾಯ ಮಾಡಲು ಬಯಸುವವರಿಗೆ ಉಪಯುಕ್ತವಾಗಬಹುದು.

ಮೊದಲ ಉಳಿತಾಯ ಮಾಡಿ, ಆಮೇಲೆ ಖರ್ಚು ಮಾಡಿ ಎಂದು ಒಬ್ಬರು ಸಲಹೆ ನೀಡಿದ್ದಾರೆ. ಅದಕ್ಕೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. "ಇದು ಹೇಗೆ ಸಾಧ್ಯ. ನಾನು 1 ಲಕ್ಷ ರೂ ತಿಂಗಳಿಗೆ ಸಂಪಾ...