Bengaluru, ಮಾರ್ಚ್ 23 -- Mollywood OTT Movies: ಒಟಿಟಿಯಲ್ಲಿ ಮಲಯಾಳಂ ಸಿನಿಮಾ ಹುಡುಕುತ್ತಿದ್ದೀರಾ? ಕಳೆದ ಎರಡ್ಮೂರು ವಾರಗಳಿಂದ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 5 ಸಿನಿಮಾಗಳ ವಿವರ ಇಲ್ಲಿದೆ. ಕ್ರೈಂ ಥ್ರಿಲ್ಲರ್‌ ಸಿನಿಮಾದಿಂದ ಹಿಡಿದು, ಫ್ಯಾಮಿಲಿ ಡ್ರಾಮಾ, ಕಾಮಿಡಿ ಜತೆಗೆ ಸಸ್ಪೆನ್ಸ್‌ ಸಿನಿಮಾಗಳೂ ಸ್ಟ್ರೀಮಿಂಗ್‌ ಆರಂಭಿಸಿವೆ. ಚಿತ್ರಮಂದಿರಗಳಲ್ಲಿ ಹಿಟ್‌ ಪಟ್ಟ ಪಡೆದು, ಒಟಿಟಿಯಲ್ಲಿಯೂ ಕಮಾಲ್‌ ಮಾಡುತ್ತಿವೆ ಈ ಸಿನಿಮಾಗಳು.

ಆಫೀಸರ್ ಆನ್ ಡ್ಯೂಟಿ ಅನ್ನೋ ಚೊಚ್ಚಲ ಸಿನಿಮಾ ಮೂಲಕವೇ ನಿರ್ದೇಶಕ ಜಿತು ಅಶ್ರಫ್ ಗಮನ ಸೆಳೆದಿದ್ದಾರೆ. ಈ ಸಿನಿಮಾ ಮೂಲಕ ದಕ್ಷ ಪೊಲೀಸ್‌ ಆಫೀಸರ್‌ ಕಥೆಯನ್ನು ಅಷ್ಟೇ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ ಜಿತು. ಆಕ್ಷನ್‌ ಜತೆಗೆ ಥ್ರಿಲ್ಲಿಂಗ್‌ ಎಳೆಯ ಈ ಸಿನಿಮಾ, ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಇದೀಗ ಒಟಿಟಿಯಲ್ಲಿಯೂ ಕಮಾಲ್‌ ಮಾಡುತ್ತಿದೆ. ಕುಂಚಾಕೋ ಬೋಬನ್‌ ಮತ್ತು ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿನ ಈ ಸಿನಿಮಾ ಸದ್ಯ ನೆಟ್‌ಫ್ಲಿಕ್ಸ್‌ ಒಟಿಟಿಯಲ...