Mmhills, ಮಾರ್ಚ್ 30 -- ಯುಗಾದಿ ಜಾತ್ರೆಯ ಪ್ರಯುಕ್ತ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಮಹಾ ರಥೋತ್ಸವವು ಮಾದಪ್ಪನ ಸನ್ನಿಧಿಯಲ್ಲಿ ಜರುಗಿತು,

ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ಸಹಿತ ನಾನಾ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಯುಗಾದಿ ರಥೋತ್ಸವದಲ್ಲಿ ಭಾಗಿಯಾದರು.

101 ಬೇಡಗಂಪಣ ಬಾಲಕಿಯರಿಂದ ಬೆಲ್ಲದಾರತಿ ಬೆಳಗಿ ರಥೋತ್ಸವಕ್ಕೆ ನಂತರ ಚಾಲನೆ ನೀಡಲಾಯಿತು. ದೇಗುಲದ ಸುತ್ತಲೂ ರಥೋತ್ಸವ ಬಂದಾಗ ಭಕ್ತರು ಉಘೇ ಮಾದಪ್ಪ ಎಂದು ನಮಿಸಿದರು,

ಈ ಬಾರಿ ಬಿದಿರು ಹಾಗೂ ಹುರಿಯ ಹಗ್ಗಗಳಿಂದ ತೇರು ಸಿದ್ಧ ಮಾಡಲಾಗಿದ್ದು, 52 ಅಡಿ ತೇರಿನಲ್ಲಿ 5 ಚೌಕ ಪೆಟ್ಟಿಗೆ ನಿರ್ಮಾಣ ಮಾಡಿದ್ದು ವಿಶೇಷ.

ಮೊದಲ ಪೆಟ್ಟಿಗೆ, ಗುಬುರು, ಬಾಗಲವಾಡಿ, ದುಂಡದೂಡು, ತಾಳಗಳನ್ನು ರಥೋತ್ಸವಕ್ಕೆ ಬಳಸಲಾಯಿತು. ಇದಕ್ಕೆ ಸುಂದರ ವಸ್ತ್ರ ಧಾರಣೆ ಮಾಡಲಾಗಿದ್ದು, ತಳಿರು ತೋರಣ ಹಾಗೂ ಛತ್ರ, ಕಳಸಗಳನ್ನು ಅಳವಡಿಸಿರುವ ತೇರು ಕಂಗೊಳಿಸಿತು.

ಬೆಳಿಗ್ಗೆ 8ರಿಂದ 9ರ ನಡುವೆ ಮಹಾರಥೋತ್ಸವ ನಡೆದಾದ ಸೂರ್ಯನ ರಶ್ಮಿಯೂ ಭಕ್ತರ...