Mm hills, ಮಾರ್ಚ್ 26 -- ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದ ಮಲೈ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು. ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.

ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಯುಗಾದಿ ಜಾತ್ರೆಗೆ ಭಕ್ತರು ಬರುವುದರಿಂದ ಭಾರೀ ಭದ್ರತೆ ಸಹಿತ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಮಲೈ ಮಹದೇಶ್ವರ ಕ್ಷೇತ್ರಕ್ಕೆ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ಭಾಗದಿಂದಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಜಾತ್ರೆ ಕಾರಣದಿಂದ ಮಾಹಿತಿ ಕೇಂದ್ರ ಆರಂಭಿಸಿ ಭಕ್ತರಿಗೆ ಮಾಹಿತಿ ಒದಗಿಸಲಾಗುತ್ತಿದೆ.

ಮಲೈ ಮಹದೇಶ್ವರ ಬೆಟ್ಟಕ್ಕೆ ಕೆಲವರು ಮೆಟ್ಟಿಲುಗಳನ್ನು ಏರಿ ಆಗಮಿಸುತ್ತಾರೆ, ಬಿಸಿಲನ್ನೂ ಲೆಕ್ಕಿಸದೇ ಭಕ್ತರು ಬೆಟ್ಟಕ್ಕೆ ಬರುವ ಸಂಪ್ರದಾಯವಿದೆ.

ಬೆಟ್ಟದಲ್ಲಿ ದೀಪಾಲಂಕಾರ ಸಹಿತ ಭಕ್ತರನ್ನು ಆಕರ್ಷಿಸಲು ವಿವಿಧ ಚಟುವಟಿಕೆಗಳು ನಡೆದಿವೆ. ಭಾನುವಾರದವರಗೂ ಯುಗಾದಿ ಜಾತ್ರಾ ಮಹೋತ್ಸವ ಬೆಟ್ಟದಲ್ಲಿ ಇರಲಿದೆ.

ಮಲೈ ಮಹದಶ್ವರ ಬೆಟ್ಟದಲ್ಲಿ ಯುಗಾದಿ ದಿನ ನಡೆ...