Mmhills, ಮಾರ್ಚ್ 1 -- ಚಾಮರಾಜನಗರ, ಬೆಂಗಳೂರು, ನಂಜನಗೂಡು, ಕನಕಪುರ, ಮಂಡ್ಯ, ಮಳವಳ್ಳಿ, ರಾಮನಗರ, ಬಿಡದಿ, ಚನ್ನಪಟ್ಟಣ, ಕೆಎಂ ದೊಡ್ಡಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಬಂದಿದ್ದಾರೆ. ಕನಕಪುರ ಭಾಗದಿಂದ ಕಾವೇರಿ ನದಿದಾಟಿ ಶಾಗ್ಯ ಮೂಲಕ ಅರಣ್ಯ ನಡುವೆ ಕಾಲ್ನಡಿಗೆ ಮೂಲಕ ಅಪಾರ ಸಂಖ್ಯೆಯ ಭಕ್ತರು ಬೆಟ್ಟವನ್ನು ತಲುಪಿದ್ದರು.

ಮಲೈ ಮಹದೇಶ್ವರ ಬೆಟ್ಟದಲ್ಲಿನ ಜಾತ್ರಾ ಮಹೋತ್ಸವದ ವೇಳೆ ಕಂಡು ಬಂದ ಚಿತ್ರಣವನ್ನು ಡ್ರೋಣ್‌ನಲ್ಲಿ ಸೆರೆಹಿಡಿಯಲಾಗಿದೆ.

ಈ ದಿನ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಗಡಿಭಾಗದಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ರಥೋತ್ಸವ ಸಡಗರಿಂದ ನಡೆಯಿತು.

ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಾದಪ್ಪನ ರಥೋತ್ಸವವು ವೈಭವದಿಂದ ನಡೆಯಿತು,

ಭಕ್ತರ ಉಘೇ ಮಾದಪ್ಪ ಉದ್ಘಾರದ ನಡುವೆ ದೇವಸ್ಥಾನದ ಒಂದು ಸುತ್ತನ್ನು ರಥ ಹಾಕಿ ಬಂದಾಗ ಭಕ್ತರು ನಿಂತಲ್ಲೇ ...