ಭಾರತ, ಮಾರ್ಚ್ 5 -- ಪಿಐಎಲ್‌ ಅಥವಾ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂಬುದು ಅನ್ಯಾಯಗಳನ್ನು ಎದುರಿಸುವುದಕ್ಕೆ ಇರುವ ಪ್ರಬಲ ಕಾನೂನು ಅಸ್ತ್ರ. ಆದರೆ, ಕೆಲವರು ಅದನ್ನು ದುರ್ಬಳಕೆ ಮಾಡುತ್ತಿರುವ ಕಾರಣ ಈಗ ಪಿಐಎಲ್ ಎಂದ ಕೂಡಲೇ ಅನುಮಾನದಿಂದ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ವಿಷಾದ ವ್ಯಕ್ತಪಡಿಸಿದ್ದಾರೆ.

ಆಡು ಭಾಷೆಯಲ್ಲಿ ಹೇಳುವುದಾದರೆ ಪಿಐಎಲ್ ಎಂಬುದು ಈಗ ಪೈಸಾ ಇಂಟರೆಸ್ಟ್ ಲಿಟಿಗೇಶನ್‌, ಪಬ್ಲಿಸಿಟಿ ಇಂಟರೆಸ್ಟ್ ಲಿಟಿಗೇಶನ್‌, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಶನ್‌.. ಎಂದೆಲ್ಲ ಹೇಳಬಹುದು ಎಂದು ಬಹಳ ವಿಷಾದದೊಂದಿಗೆ ನ್ಯಾಯಮೂರ್ತಿ ಬಿ ವಿ ನಾಗರತ್ನ ವಿವರಿಸಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ಪ್ರೊಫೆಸರ್ ಉಪೇಂದ್ರ ಭಕ್ಷಿ ಅವರ 'ಲಾ, ಜಸ್ಟೀಸ್‌, ಸೊಸೈಟಿ' ಎಂಬ ಪುಸ್ತಕ ಬಿಡುಗಡೆ ಮಾಡಿದರು. ನವದೆಹಲಿಯ ಇಂಡಿಯನ್ ಲಾ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪೇಂದ್ರ ಭಕ್ಷಿ ಹಾಗೂ ವಿಕೆ ಅಹುಜಾ ಅವರೂ ಜತೆಗಿದ್ದರು. ಆಕ್...