ಭಾರತ, ಮಾರ್ಚ್ 17 -- ನಮ್ಮಲ್ಲಿ ಅನೇಕರು ಮನೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ವಾಸ್ತು ನಿಯಮಗಳನ್ನು ಪಾಲಿಸುತ್ತಾರೆ. ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಸಕಾರಾತ್ಮಕ ಶಕ್ತಿ ಹರಿಯಲು ಅನುವಾಗುತ್ತದೆ, ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದು ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಜೊತೆಗೆ ವಾಸ್ತುನಿಯಮಗಳನ್ನು ಪಾಲಿಸುವುದು ಲಕ್ಷ್ಮೀದೇವಿಯ ಅನುಗ್ರಹಕ್ಕೂ ಕಾರಣವಾಗುತ್ತದೆ. ನೀವು ಲಕ್ಷ್ಮೀದೇವಿಯ ಆಶೀರ್ವಾದ ಪಡೆದು ಯಾವುದೇ ತೊಂದರೆಗಳು ಬಾರದಂತೆ ಜೀವನ ಸಾಗಿಸಲು ಈ ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಬೇಕು.

ಪ್ರತಿಯೊಬ್ಬರ ಮನೆಯಲ್ಲೂ ಕನ್ನಡಿ ಇರುತ್ತದೆ. ಕನ್ನಡಿ ಇಲ್ಲದ ಮನೆಯೇ ಇಲ್ಲ ಅಂತ ಹೇಳಬಹುದು. ಆದರೆ ಮನೆಯಲ್ಲಿ ಕನ್ನಡಿ ಇಡಲು ಕೆಲವು ವಾಸ್ತುನಿಯಮಗಳಿವೆ. ಆದರೆ ಹಲವರಿಗೆ ಈ ನಿಯಮಗಳ ಬಗ್ಗೆ ಅರಿವಿಲ್ಲದೇ ಅವರು ತಪ್ಪು ಮಾಡುತ್ತಾರೆ. ಕನ್ನಡಿ ಇಡಲು ಸೂಕ್ತ ದಿಕ್ಕು ತಿಳಿಯದೇ ವಾಸ್ತು ನಿಯಮಕ್ಕೆ ವಿರುದ್ಧ ದಿಕ್ಕಿನಲ್ಲಿ ಇರಿಸಿ ಸಾಕಷ್ಟು ನಷ್ಟಗಳನ್ನು ಎದುರಿಸುತ್ತಾರೆ. ಆ ಕಾರಣಕ್ಕೆ ಮನೆಯ ಯಾವ ಭಾಗದಲ್ಲ...