ಭಾರತ, ಮಾರ್ಚ್ 27 -- Milk price Hike: ಕಳೆದ ಎರಡು ತಿಂಗಳಿನಿಂದಲೂ ಇದ್ದ ಕರ್ನಾಟಕ ಹಾಲು ಮಹಾಮಂಡಳ ಹಾಲು ಹಾಗೂ ಹಾಲಿನ ಉತ್ಪನ್ನಗಳ ದರ ಏರಿಕೆ ಪ್ರಸ್ತಾವಕ್ಕೆ ಸಚಿವ ಸಂಪುಟ ಅನುಮತಿ ನೀಡಿದೆ. ನಂದಿನಿ ಹಾಲಿನ ದರವನ್ನು ಪ್ರತೀ ಲೀಟರ್‌ಗೆ 4 ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆ ಜಾರಿಗೆ ಅನುಮೋದನೆ ನೀಡಲಾಗಿದೆ. ಬಹುತೇಕ ಬರುವ ಏಪ್ರಿಲ್‌ 1ರಿಂದಲೇ ಅನ್ವಯವಾಗುವಂತೆ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆಯಿದೆ. ಸದ್ಯ ಅರ್ಧ ಲೀಟರ್‌ ಸಾಮಾನ್ಯ ನಂದಿನಿ ಹಾಲಿನ ಬೆಲೆ 23 ರೂ. ಇದ್ದು ಇನ್ನು ಮುಂದೆ 25 ರೂ. ಆಗಲಿದೆ. ಅದೇ ರೀತಿ ಒಂದು ಲೀಟರ್‌ ಹಾಲಿನ ಬೆಲೆ 46 ರೂ. ಇತ್ತು. ಅದು 50 ರೂ. ಆಗಬಹುದು. ಉಳಿದಂತೆ ವಿಶೇಷವಾಗಿರುವ ನಾಲ್ಕೈದು ರೀತಿಯ ಹಾಲಿನ ಬೆಲೆಗಳೂ ಈಗಿರುವ ದರಕ್ಕಿಂತ ನಾಲ್ಕು ರೂ. ಹೆಚ್ಚಾಗಲಿದೆ. ಅಧಿಕೃತವಾಗಿ ದರ ಏರಿಕೆ ಪ್ರಮಾಣ ಹಾಗೂ ದಿನಾಂಕ ಪ್ರಕಟಣೆ ಆಗಬೇಕಾಗಿದೆ.

ಈಗಾಗಲೇ ಹಾಲಿನ ದರವನ್ನು ಪ್ರತ...