Bangalore, ಫೆಬ್ರವರಿ 3 -- ಬೆಂಗಳೂರು: ಕರ್ನಾಟಕದಲ್ಲಿ ಮೂರು ವಾರದಿಂದ ಭಾರೀ ಸದ್ದು ಮಾಡುತ್ತಿರುವ ಮೈಕ್ರೋ ಫೈನಾನ್ಸ್‌ನ ಸಾಲ ವಸೂಲಾತಿ ಕಿರುಕುಳ, ಇದರಿಂದ ಹೆಚ್ಚಿರುವ ಆತ್ಮಹತ್ಯೆ ಪ್ರಕರಣಗಳು, ಮನೆ ಬಿಟ್ಟು ಹೋಗುವ ಕುಟುಂಬಗಳ ರೋಧನದ ನಡುವೆಯೇ ಕರ್ನಾಟಕ ಸರ್ಕಾರವೂ ಅನಧಿಕೃತವಾಗಿ ಹಾಗೂ ಯಾವುದೇ ನೋಂದಣಿ ಇಲ್ಲದೇ ಹಣಕಾಸು ವಹಿವಾಟು ನಡೆಸುವವರ ಮೇಲೆ ನಿಯಂತ್ರಣ ಹೇರಲು ಸುಗ್ರಿವಾಜ್ಞೆ ಜಾರಿಗೊಳಿಸಲಿದೆ. ಇದಕ್ಕಾಗಿ ಕರ್ನಾಟಕ ಮೈಕ್ರೊ ಫೈನಾನ್ಸ್‌ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ-2025 ಕರಡನ್ನು ಕರ್ನಾಟಕ ಸರ್ಕಾರದ ಹಿರಿಯ ಸಚಿವರು ಹಾಗೂ ಅಧಿಕಾರಿಗಳನ್ನೊಳಗೊಂಡ ಸಮಿತಿಯು ಸಿದ್ದಪಡಿಸಿದೆ. ನೋಂದಣಿ ಮಾಡಿಸಿಕೊಳ್ಳಲದೇ ಸಾಲ ನೀಡಿ ಕಿರುಕುಳ ಕೊಡುವವರನ್ನು ಜೈಲಿಗೆ ಅಟ್ಟಿ ದಂಡ ಹಾಕುವ ಹಾಗೂ ಸಾಲ ಪಡೆದವರು ಯಾವುದೇ ಹಣ ನೀಡದಂತೆ ನಿರ್ದೇಶಿಸುವ ಹಲವಾರು ಅಂಶಗಳನ್ನೊಳಗೊಂಡ ಕರಡನ್ನು ವಾರದೊಳಗೆ ಸಿದ್ದಪಡಿಸಲಾಗಿದೆ.

ಬೆಂಗಳೂರಿನಲ್ಲಿ ಭಾನುವಾರ ಸಚಿವರಾದ ಎಚ್‌.ಕೆ.ಪಾಟೀಲ್‌, ಕೃಷ್ಣಬೈರೇಗೌಡ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ...