ಭಾರತ, ಫೆಬ್ರವರಿ 2 -- ಬೆಂಗಳೂರು: ನಿಮ್ಮ ಊರುಗಳಲ್ಲಿ ಮೈಕ್ರೋ ಫೈನಾನ್ಸ್‌ ಹೆಸರಿನಲ್ಲಿ ತೊಂದರೆ ಕೊಡಲಾಗುತ್ತಿದೆಯೇ, ಬೆದರಿಕೆ ಹಾಕುವುದು, ಮನೆ ಜಪ್ತಿಗೆ ಅಕ್ರಮವಾಗಿ ಪ್ರಯತ್ನಿಸುತ್ತಿದ್ದರೆ ಅಂತಹವರ ವಿರುದ್ದ ಕಠಿಣ ಕ್ರಮಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಅಪರ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಒಂಬುಡ್ಸ್‌ಮನ್‌ ನೇಮಕ ಮಾಡಲಾಗುತ್ತಿದೆ. ಕಿರುಕುಳ ನೀಡಿದರೆ ಇಲ್ಲವೇ ತೊಂದರೆ ಕೊಟ್ಟರೆ ಕೂಡಲೇ ಒಂಬುಡ್ಸ್‌ಮನ್‌ಗೆ ದೂರು ನೀಡಿದರೆ ಅವರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಿದ್ದಾರೆ. ಇದಲ್ಲದೇ ಮೈಕ್ರೋಫೈನಾನ್ಸ್‌ಗಳ ಕಾರ್ಯವೈಖರಿ ಹೇಗಿರಬೇಕು ಎನ್ನುವ ಹಲವಾರು ಸೂಚನೆಗಳನ್ನು ಕರ್ನಾಟಕ ಸರ್ಕಾರ ನೀಡಿದೆ. ಸದ್ಯವೇ ಕಠಿಣ ಕಾನೂನು ರಚನೆಗೆ ಸುಗ್ರಿವಾಜ್ಞೆಯನ್ನು ಕೂಡ ಹೊರಡಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ನೇತೃತ್...