ಭಾರತ, ಜನವರಿ 26 -- Mercury Transit: ಗ್ರಹಗಳ ನಿರ್ದಿಷ್ಟ ಸಂಚಾರವು ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಬುಧ ಗ್ರಹವು ಮಕರ ರಾಶಿಯನ್ನು ಪ್ರವೇಶಿಸಿರುವುದು 12 ರಾಶಿಯವರಿಗೆ ಏನೆಲ್ಲಾ ಫಲಾಫಲಗಳಿವೆ ಎಂಬುದನ್ನು ತಿಳಿದುಕೊಳ್ಳೋಣ. 2025ರ ಜನವರಿ 24 ರಂದು ಸಂಜೆ 05:45 ಕ್ಕೆ ಬುಧ ಗ್ರಹವು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ ಅದರ ಶಕ್ತಿಯು ಜೀವನದ ಉಪಯುಕ್ತ ಭಾಗಕ್ಕೆ ಚಲಿಸುತ್ತದೆ. ಈ ಗ್ರಹಗಳ ಸಂಚಾರವು ಸಂವಹನ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಯೋಜನೆಯನ್ನು ಹೆಚ್ಚು ಪ್ರಾಯೋಗಿಕ, ಸಂಘಟಿತ ಮತ್ತು ವ್ಯವಸ್ಥಿತವಾಗಿಸುತ್ತದೆ. ಸಂವಹನ ಮತ್ತು ಚಿಂತನೆಯ ಗ್ರಹವಾದ ಬುಧ ಗ್ರಹ, ಮಕರ ರಾಶಿಯವರ ಕರ್ತವ್ಯ ಪ್ರಜ್ಞೆ ಮತ್ತು ಯೋಜನೆಗಳು ಯಶಸ್ವಿಯಾಗುವಂತೆ ಮಾಡುತ್ತದೆ. ಸಮಸ್ಯೆಗಳನ್ನು ತೆರವುಗೊಳಿಸುತ್ತದೆ. ಒಟ್ಟಾರೆಯಾಗಿ 12 ರಾಶಿಯವರ ಫಲಾಫಲಗಳನ್ನು ಇಲ್ಲಿ ತಿಳಿಯೋಣ.

ಮೇಷ ರಾಶಿ: ಕೆಲಸದಲ್ಲಿ ಅಥವಾ ಸಾರ್ವಜನಿಕ ವೇದಿಕೆಗಳಲ್ಲಿ ಮಿಂಚುತ್ತೀರಿ. ಜವಾಬ್ದಾರಿಗಳನ್ನ...