ಭಾರತ, ಫೆಬ್ರವರಿ 12 -- ಬುಧ ಗ್ರಹವು ಫೆಬ್ರುವರಿ 11 ರಂದು ಮಧ್ಯಾಹ್ನ 12.41ಕ್ಕೆ ಕುಂಭ ರಾಶಿಯನ್ನು ಪ್ರವೇಶ ಮಾಡಿದೆ. ಬುಧನ ಸ್ಥಾನಪಲ್ಲಟವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಲಿದೆ. ಈ ಬದಲಾವಣೆಯ ಸಂದರ್ಭ ಕೆಲವು ರಾಶಿಯವರು ಅದೃಷ್ಟವನ್ನು ಪಡೆದರೆ ಕೆಲವು ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ. ಹಾಗಾದರೆ ಬುಧ ಸಂಕ್ರಮಣದಿಂದ ಮೇಷದಿಂದ ಮೀನರಾಶಿವರೆಗೆ ಯಾವೆಲ್ಲಾ ರಾಶಿಯವರಿಗೆ ಏನು ಫಲ ಎಂಬ ವಿವರ ಇಲ್ಲಿದೆ.

ಕುಂಭ ರಾಶಿಯಲ್ಲಿ ಬುಧನ ಸಂಚಾರದ ಸಮಯದಲ್ಲಿ ನಿಮ್ಮ ಪ್ರಯತ್ನಗಳು ಫಲ ನೀಡುವುದರೊಂದಿಗೆ ನಿಮ್ಮ ದಾರಿಗಳೆಲ್ಲಾ ಸುಗಮವಾಗಲಿವೆ. ದೀರ್ಘ ಪ್ರವಾಸಗಳು ಮತ್ತು ಜೀವನವನ್ನು ಬದಲಾಯಿಸುವ ಅನುಭವಗಳು ನಿಮ್ಮದಾಗಲಿವೆ. ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಲಿವೆ. ವಿದೇಶ ಪ್ರಯಾಣದ ಅನುಭವ ನಿಮ್ಮದಾಗಲಿದೆ. ವ್ಯಾಪಾರಸ್ಥರು ಲಾಭಕ್ಕಾಗಿ ಒತ್ತಡ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಸಂಗಾತಿಯೊಂದಿಗೆ ಸಂವಹನ ಸಮಸ್ಯೆ ಎದುರಾಗಬಹುದು. ಆರೋಗ್ಯದ ದೃಷ್ಟಿಯಿಂದ ಭುಜದ ನೋವು ತೊಂದರೆ ನೀಡಬಹುದು.

ಈ ಸಮಯದಲ್ಲಿ ನಿಮಗೆ ಅನಿರೀಕ್...