ಭಾರತ, ಮಾರ್ಚ್ 20 -- ಬುಧ ಗ್ರಹವು ಮಾರ್ಚ್ 15 ರಿಂದ ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ. ಬುಧನ ಹಿಮ್ಮುಖ ಚಲನೆಯು ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಇದರಿಂದ ಕೆಲವು ರಾಶಿಯವರಿಗೆ ಒಳಿತಾದರೆ ಕೆಲವು ರಾಶಿಯವರಿಗೆ ಕೇಡಾಗುವ ಸಂಭವವಿದೆ. ಆ ಕಾರಣಕ್ಕೆ ಈ ಕೆಲವು ರಾಶಿಯವರು ಸಾಕಷ್ಟು ಎಚ್ಚರದಿಂದ ಇರಬೇಕಾಗುತ್ತದೆ.

ಜ್ಯೋತಿಷಿಗಳ ಪ್ರಕಾರ ಬುಧನ ಹಿಮ್ಮುಖ ಚಲನೆಯು ಮುಖ್ಯವಾಗಿ 3 ರಾಶಿಯವರಿಗೆ ಆಪತ್ತನ್ನು ಉಂಟು ಮಾಡುವ ಸಾಧ್ಯತೆ ಇದೆ. ಇವರ ಜೀವನದಲ್ಲಿ ಹಲವು ಅಡೆತಡೆಗಳು ಕೂಡ ಎದುರಾಗಬಹುದು. ಹಾಗಾದರೆ ಆ 3 ರಾಶಿಗಳಲ್ಲಿ ನಿಮ್ಮ ರಾಶಿಯೂ ಇದ್ಯಾ ಗಮನಿಸಿ.

ಬುಧನ ಹಿಮ್ಮೆಟ್ಟುವಿಕೆ ಅಥವಾ ಬುಧನ ಹಿಮ್ಮುಖ ಚಲನೆಯು ಮೇಷ ರಾಶಿಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಲಿದೆ. ಇದರಿಂದ ನೀವು ಅಂದುಕೊಂಡ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ನೀವು ಹೇಳಬೇಕು ಎಂದುಕೊಂಡಿರುವ ವಿಚಾರವನ್ನು ಸರಿಯಾಗಿ ಹೇಳಲು ಕೂಡ ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಮಾತಿನಿಂದ ಜಗಳಗಳಾಗುವ ಸಂಭವ ಹೆಚ್ಚು. ಆದರೆ ನಿರಾಸೆಗೊಳ್ಳದಿರಿ. ನಿಮ್ಮ ಮ...