ಭಾರತ, ಫೆಬ್ರವರಿ 15 -- ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಬುದ್ಧಿಶಕ್ತಿ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗುತ್ತದೆ. ಫೆಬ್ರವರಿ 27 ರಂದು ಬುಧನು ಮೀನ ರಾಶಿಗೆ ಪ್ರವೇಶಿಸುತ್ತಾನೆ. ಮೇ 7 ರವರೆಗೆ ಬುಧನು ಮೀನ ರಾಶಿಯಲ್ಲಿ ಇರುತ್ತಾನೆ. ಈಗಾಗಲೇ ರಾಹು ಮೀನು ರಾಶಿಯಲ್ಲಿದ್ದು ಈ 2 ಗ್ರಹಗಳ ಸಂಯೋಜನೆ ಆಗಲಿದೆ. ಅಂದರೆ ಮೀನ ರಾಶಿಯಲ್ಲಿ ಬುಧ ಮತ್ತು ರಾಹು ಸಂಧಿಸಲಿದ್ದಾರೆ.

ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಬುಧ ಮತ್ತು ರಾಹುವಿನ ಸಂಯೋಜನೆಯು ಕೆಲವು ರಾಶಿಯವರಿಗೆ ತುಂಬಾ ಶುಭ ಮತ್ತು ಪ್ರಯೋಜನಕಾರಿಯಾಗಿದೆ. ಈ ರಾಶಿಯವರು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಅದೃಷ್ಟ ಇವರ ಕಡೆಗೆ ತಿರುಗುತ್ತದೆ.

ಬುಧ ಮತ್ತು ರಾಹುವಿನ ಸಂಯೋಜನೆಯು ವೃಷಭ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಕೆಲಸದಲ್ಲಿನ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ಉದ್ಯೋಗಗಳಲ್ಲಿ ಪ್ರಗತಿ ಕಂಡುಬರಲಿದೆ. ವ್ಯವಹಾರದಲ್ಲಿ ಯಶಸ್ವಿಯಾಗುತ್ತೀರಿ. ಸಕಾರಾತ್ಮಕ ಶಕ್ತಿ ಹ...