ಭಾರತ, ಮಾರ್ಚ್ 6 -- Menstrual Leave: ಮಹಿಳಾ ದಿನಾಚರಣೆ (ಮಾರ್ಚ್ 8) ಸನಿಹದಲ್ಲಿ ಲಾರ್ಸೆನ್ ಆಂಡ್ ಟೂಬ್ರೋ (ಎಲ್‌ ಆಂಡ್ ಟಿ) ಕಂಪನಿ ತನ್ನ ಮಹಿಳಾ ಉದ್ಯೋಗಿಗಳ ಅನುಕೂಲಕ್ಕಾಗಿ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆಯನ್ನು ಘೋಷಿಸಿದೆ. ಎಲ್‌ ಆಂಡ್ ಟಿ ಕಂಪನಿ ಚೇರ್‌ಮನ್ ಎಸ್‌ಎನ್‌ ಸುಬ್ರಹ್ಮಣ್ಯನ್ ಅವರು ಈ ವಿಚಾರ ಪ್ರಕಟಿಸಿದ್ದು, ಎಲ್‌ ಆಂಡ್ ಟಿ ಪೇರೆಂಟ್ ಕಂಪನಿಯ ಮಹಿಳಾ ಉದ್ಯೋಗಿಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ಘೋಷಿಸಿದ ಮೊದಲ ಕಂಪನಿ ಎಂಬ ಕೀರ್ತಿಗೆ ಭಾಜನವಾಗಿದೆ.

ಎಲ್‌ ಆಂಡ್ ಟಿ ಕಂಪನಿ ಚೇರ್‌ಮನ್ ಎಸ್‌ಎನ್‌ ಸುಬ್ರಹ್ಮಣ್ಯನ್ ಅವರು ಮಹಿಳಾ ದಿನಾಚರಣೆ ಸನಿಹದಲ್ಲಿ ತಿಂಗಳಿಗೆ 1 ದಿನ ವೇತನ ಸಹಿತ ಮುಟ್ಟಿನ ರಜೆ ಘೋಷಿಸಿದರು. ಈ ರಜೆಯನ್ನು ಅನುಷ್ಠಾನಗೊಳಿಸುವ ವಿಚಾರವಾಗಿ ಅಗತ್ಯ ನೀತಿ ರೂಪಿಸುವ ಕೆಲಸವಾಗುತ್ತಿದ್ದು, ಶೀಘ್ರವೇ ವಿಸ್ತೃತ ವಿವರವನ್ನು ಉದ್ಯೋಗಿಗಳಿಗೆ ತಿಳಿಸಲಾಗುವುದು ಎಂದು ಕ...