Melkote, ಏಪ್ರಿಲ್ 7 -- Melkote Vairamudi 2025:ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಇರುವ ಮಂಡ್ಯ ಜಿಲ್ಲೆಯ ರಾಮಾನುಜ ಕ್ಷೇತ್ರವಾದ ಮೇಲುಕೋಟೆ ವೈರಮುಡಿ ಉತ್ಸವದ ಪ್ರಮುಖ ಕಾರ್ಯಕ್ರಮ ಸೋಮವಾರ ಬೆಳಿಗ್ಗೆಯಿಂದಲೇ ಶುರುವಾಗಿದೆ. ಮಂಡ್ಯದಿಂದ ವೈರಮುಡಿಯನ್ನು ಮೆರವಣಿಗೆ ಮೂಲಕ ಮೇಲುಕೋಟೆಗೆ ತರುವ ಚಟುವಟಿಕೆ ಆರಂಭಗೊಂಡಿದೆ. ಸೋಮವಾರ ಬೆಳಿಗ್ಗೆಯೇ ಮಂಡ್ಯ ಜಿಲ್ಲಾ ಖಜಾನೆಯಲ್ಲಿ ಪೂಜೆಯನ್ನು ಸಲ್ಲಿಸಿ ವೈರಮುಡಿಗಳನ್ನು ಹೊರ ತೆಗೆಯಲಾಯಿತು. ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ವೈರಮುಡಿಗಳ ಪೆಟ್ಟಿಗೆಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಅಲ್ಲಿಂದ ವೈರಮುಡಿಯನ್ನು ಮೆರವಣಿಗೆ ಮೂಲಕ ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಯಿತು. ಭಾರೀ ಭದ್ರತೆ ನಡುವೆ ಮೆರವಣಿಗೆ ಸಾಗಿತು. ರಾತ್ರಿ ವೈರಮುಡಿ ಉತ್ಸವ ಮೇಲುಕೋಟೆಯಲ್ಲಿ ನಡೆಯಲಿದ್ದು. ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಭಕ್ತರು ವೈರಮುಡಿಗೆ ಆಗಮಿಸಿದ್ದಾರೆ.

ಮಂಡ್ಯ ಜಿಲ್...