Melkote, ಏಪ್ರಿಲ್ 4 -- Melkote Vairamudi 2025: ಕರ್ನಾಟಕದ ಪ್ರಮುಖ ಧಾರ್ಮಿಕ ತಾಣವಾದ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವದ ಚಟುವಟಿಕೆಗಳು ಕಳೆಗಟ್ಟಿವೆ. ಈ ವರ್ಷದ ವೈರಮುಡಿ ಉತ್ಸವದ ಪ್ರಮುಖ ಭಾಗವಾದ ಕಲ್ಯಾಣೋತ್ಸವಕ್ಕೆ ವರ್ಷಧಾರೆಯು ಗುರುವಾರ ಮುನ್ನುಡಿ ಬರೆಯಿತು. ನಂತರ ಕಲ್ಯಾಣಿಸಮುಚ್ಚಯದ ಧಾರಾಮಂಟಪದಲ್ಲಿ ಚೆಲುವನಾರಾಯಣಸ್ವಾಮಿ ಹಾಗೂ ಮಹಾಲಕ್ಷ್ಮಿ ಕಲ್ಯಾಣನಾಯಕಿ ಅಮ್ಮನವರ ಕಲ್ಯಾಣೋತ್ಸವ ವೈಭವದಿಂದ ನೆರವೇರಿತು. ವರ್ಷಕ್ಕೆ ಒಮ್ಮೆಮಾತ್ರ ವೈರಮುಡಿ ಬ್ರಹ್ಮೋತ್ಸವ ವೇಳೆ ಧಾರಾಮಂಟಪದಲ್ಲಿ ನಡೆಯುವ ಕಲ್ಯಾಣೋತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲು ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ನೂರಾರು ಭಕ್ತರು ಭಾಗವಹಿಸಿದ್ದರು. ಧಾರಾಮಹೋತ್ಸವದ ಅಂಗವಾಗಿ ಇಡೀ ಧಾರಾಮಂಟಪವನ್ನು ಆಕರ್ಷಕವಾಗಿ ಪುಷ್ಪಾಲಂಕಾರ ಮಾಡಿ ತಳಿರುತೋರಣಗಳಿಂದ ಸಿಂಗಾರ ಮಾಡಲಾಗಿತ್ತು ಕಲ್ಯಾಣಿಸಮುಚ್ಚಯವನ್ನು ದೀಪಾಲಂಕಾರದಿಂದ ಝಗಮಗಿಸುವಂತೆ ಸಿಂಗಾರಮಾಡಲಾಗಿತ್ತು.
ಕಲ್ಯಾಣನಾಯಕಿ ಅಮ್ಮನವರಿಗೆ ಸಂಜೆ 5-30 ಗಂಟೆಯ ವೇಳೆ...
Click here to read full article from source
To read the full article or to get the complete feed from this publication, please
Contact Us.