Mandya, ಏಪ್ರಿಲ್ 1 -- ಕರ್ನಾಟಕದ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾದ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವದ ತಯಾರಿಗಳು ಭರದಿಂದ ಸಾಗಿವೆ.

ಮೇಲುಕೋಟೆಯಲ್ಲಿ ಬುಧವಾರದಿಂದ ವೈರಮುಡಿ ಧಾರ್ಮಿಕ ಚಟುವಟಿಕೆಗಳು ಶುರುವಾಗಿ ಎರಡು ವಾರಕ್ಕೂ ಹೆಚ್ಚಿನ ಕಾಲ ಮುಂದುವರಿಯಲಿವೆ.

ವೈರಮುಡಿ ಉತ್ಸವದಲ್ಲಿ ತೆಪ್ಪೊತ್ಸವವೂ ಪ್ರಮುಖವಾಗಿದ್ದು. ಇದಕ್ಕಾಗಿ ಮೇಲುಕೋಟೆಯಲ್ಲಿ ಪೂರ್ವ ತಾಲೀಮು ಸೋಮವಾರ ರಾತ್ರಿ ನಡೆದವು.

ಮೇಲುಕೋಟೆಯಲ್ಲಿರುವ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಜರುಗಲಿದ್ದು, ಇಲ್ಲಿ ನಡೆದ ಪೂರ್ವಭಾವೀ ತಾಲೀಮಿಗೆ ಶ್ರೀ ಚಲುವನಾರಾಯಣ ಉತ್ಸವ ಮೂರ್ತಿ ತರಲಾಯಿತು.

ಮೆರವಣಿಗೆಗಳ ಮೂಲಕ ಕಲ್ಯಾಣಿ ಬಳಿ ಶ್ರೀ ಚಲುವರಾಯಸ್ವಾಮಿ ಉತ್ಸವಮೂರ್ತಿಯನ್ನು ಅಲಂಕೃತ ತೆಪ್ಪದಲ್ಲಿ ಇರಿಸಲಾಯಿತು.

ಬಳಿಕ ಮೇಲುಕೋಟೆಯಲ್ಲಿ ತೆಪ್ಪೊತ್ಸವದ ಚಟುವಟಿಕೆಗಳು ನಡೆದವು. ಮುಂದಿನ ವಾರ ಅಂದರೆ ಏಪ್ರಿಲ್‌ 11 ರ ಸಂಜೆ ತೆಪ್ಪೊತ್ಸವ ಇರಲಿದೆ.

Published by HT Digital Content Services with permission from HT Kannada....