Melkote, ಮಾರ್ಚ್ 4 -- ಐತಿಹಾಸಿಕ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಏಪ್ರಿಲ್‌ 7 ರಂದು ಈ ಬಾರಿಯ ಶ್ರೀ ವೈರಮುಡಿ ಉತ್ಸವ 2025 ನಡೆಯಲಿದೆ. ಶ್ರೀ ವೈರಮುಡಿ ಬ್ರಹ್ಮೋತ್ಸವವು ಮಾರ್ಚ್ ಕೊನೆಯ ವಾರದಲ್ಲಿ ಶುರುವಾಗಲಿದ್ದು, ವಿವಿಧ ಧಾರ್ಮಿಕ ಚಟುವಟಿಕೆಗಳು ಮೇಲುಕೋಟೆಯಲ್ಲಿ ಜರುಗಲಿವೆ. ಪ್ರತಿ ವರ್ಷದಂತೆ ಈ ಬಾರಿಯೂ ವೈರಮುಡಿಗೆ ಈಗಾಗಲೇ ಮಂಡ್ಯ ಜಿಲ್ಲಾಡಳಿತ, ಪಾಂಡವಪುರ ತಾಲ್ಲೂಕು ಆಡಳಿತ ಹಾಗೂ ಮೇಲುಕೋಟೆ ದೇವಸ್ಥಾನ ಸಮಿತಿಯಿಂದ ಸಿದ್ದತೆಗಳು ಶುರುವಾಗಿವೆ.

ಕರ್ನಾಟಕದ ಭವ್ಯ ಧಾರ್ಮಿಕ ಆಚರಣೆಗಳಲ್ಲಿ ವೈರಮುಡಿ ಉತ್ಸವಕ್ಕೆ ಪ್ರಮುಖ ಸ್ಥಾನ. ಸಮೃದ್ಧಿ ಮತ್ತು ಸಂಪತ್ತು ಹಾಗೂ ಸಂಭ್ರಮದ ಸಂಕೇತವಾದ ನವಧಾನ್ಯಗಳ ಅಂಕುರಾರ್ಪಣೆಯೊಂದಿಗೆ ಫಾಲ್ಗುಣ ಪುಷ್ಯ ನಕ್ಷತ್ರ (ಮೀನ) ದಲ್ಲೇ ವೈರಮುಡಿ ಪ್ರಾರಂಭವಾಗುತ್ತದೆ. ಪುಣ್ಯಕ್ಷೇತ್ರದ ಆರಾಧ್ಯ ದೈವ ಶ್ರೀ ಚೆಲುವನಾರಾಯಣಸ್ವಾಮಿಗೆ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬಹು ವಿಜಂಭಣೆಯಿಂದ ವೈರಮುಡಿ ಬ್ರಹ್ಮೋತ್ಸವ ನಡೆದುಕೊಂಡು ಬಂದಿದೆ

ಅತ್ಯಪೂರ್ವ 24 ಆಭರ...