Melukote, ಫೆಬ್ರವರಿ 2 -- ಮೇಲುಕೋಟೆ : ಭಾರತೀಯಸಂಸ್ಕೃತಿಯ ಜೀವನಾಡಿಯಾಗಿರುವ ಜಾನಪದಕಲೆಗಳಿಗೆ ಮೂರು ದಶಕಗಳಿಂದ ವೇದಿಕೆಯಾದ ಮಂಡ್ಯ ಜಿಲ್ಲೆಯ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ಜಾನಪದ ಜಾತ್ರೆ, ರಥಸಪ್ತಮಿ ಮಹೋತ್ಸವ ಫೆಬ್ರವರಿ 5ರಂದು ನಡೆಯಲಿದೆ. ರಥಸಪ್ತಮಿಯ ಬುದವಾರ ಮುಂಜಾನೆ 6 ಗಂಟೆಗೆ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಗೆ ಸ್ವರ್ಣಲೇಪಿತ ಸೂರ್ಯಮಂಡಲ ವಾಹನೋತ್ಸವದ ವೇಳೆ ಸ್ಥಾನೀಕಂನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿರುವ 26ನೇ ವರ್ಷದ ರಾಜ್ಯಮಟ್ಟದ ಜಾನಪದ ಕಲಾಮೇಳದಲ್ಲಿ 60ಕ್ಕೂ ಹೆಚ್ಚುತಂಡಗಳ 800ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡು ಅಭೂತಪೂರ್ವ ಕಲಾರಾಧನೆಯ ಸೇವೆ ಮಾಡಲಿದ್ದಾರೆ.

ರಥಸಪ್ತಮಿ ದಿನದಂದು ಚೆಲುವನಾರಾಯಣಸ್ವಾಮಿಯ ಮೆರವಣಿಗೆ ಮೇಲುಕೋಟೆಯಲ್ಲಿ ನಡೆಯಲಿದೆ. ಅಂದು ವಿಶೇಷ ಪೂಜೆ,ಧಾರ್ಮಿಕ ವಿಧಿ ವಿಧಾನಗಳ ಜತೆಯಲ್ಲಿ ಕಲಾ ಸೇವೆಯೂ ವಿಶಿಷ್ಟವಾಗಿ ಇರುತ್ತದೆ.

ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸುವ ಕಲಾವಿದರು ದಸರಾ ಮೆರವಣಿಗೆಯನ್ನು ನೆನಪಿಸುವಂತೆ ತಮ್ಮ ತಂಡದೊಂದಿಗೆ ರಥಸಪ್ತಮಿ ಮೆರವಣಿಗ...