ಭಾರತ, ಏಪ್ರಿಲ್ 14 -- ನವದೆಹಲಿ: ಪಂಜಾಬ್‌ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದ ಆರೋಪಿಯಾಗಿರುವ ಮೆಹುಲ್ ಚೋಕ್ಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಇದೀಗ ಇವರನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಿಎನ್‌ಬಿ ಹಗರಣದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ಚೋಕ್ಸಿ ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ರೆಸಿಡೆನ್ಸಿ ಕಾರ್ಡ್ ಪಡೆದು ಪತ್ನಿ ಪ್ರೀತಿ ಚೋಕ್ಸಿ ಅವರೊಂದಿಗೆ ವಾಸಿಸುತ್ತಿದ್ದರು. ಈ ವಿಚಾರ ಬೆಳಕಿಗೆ ಬಂದ ವಾರದೊಳಗೆ ಚೋಕ್ಸಿಯನ್ನು ಬಂಧಿಸಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 13,500 ಕೋಟಿ ಸಾಲ ಪಡೆದಿರುವ ವಜ್ರ ವ್ಯಾಪಾರಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸಾಲ ಮರುಪಾವತಿ ಮಾಡದೇ ಬ್ಯಾಂಕ್ ವಂಚಿಸಿ, ವಿದೇಶಕ್ಕೆ ಓಡಿಹೋಗಿದ್ದರು. ಇವರಿಗಾಗಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಹುಡುಕಾಟ ನಡೆಸಿತ್ತು. ಇದೀಗ ಬೆಲ್ಜಿಯಂನಲ್ಲಿ ಸೆರೆ ಸಿಕ್ಕಿರುವ ಇವರನ್ನು ಅಲ್ಲಿಂದ ಗಡಿಪಾರು ಮಾಡುವಂತೆ ಮನವಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: Mehu...