ಭಾರತ, ಮಾರ್ಚ್ 10 -- Meghana Raj Sarja: ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಸದ್ಯ ಮಗ ರಾಯನ್‌ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಮಗನ ಜತೆಗಿನ ಸುಂದರ ಕ್ಷಣಗಳನ್ನು ಶೇರ್‌ ಮಾಡಿಕೊಳ್ಳುತ್ತ, ಆತನ ಬಗೆಬಗೆ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿಯೂ ಹಂಚಿಕೊಳ್ಳುತ್ತ ಅವನ ಬಾಲ್ಯದ ಸಂಭ್ರಮವನ್ನು ತಾವೂ ಅನುಭವಿಸುತ್ತಿದ್ದಾರೆ ಮೇಘನಾ ರಾಜ್.‌ ಆದರೆ, ಚಿರಂಜೀವಿ ಸರ್ಜಾ ನಿಧನದ ಬಳಿಕ, ಮೇಘನಾ ಕುಟುಂಬ ಮತ್ತು ಸರ್ಜಾ ಕುಟುಂಬ ಅನುಭವಿಸಿದ ನೋವು ಸಣ್ಣದೇನಲ್ಲ. ಆ ನೋವು ಮರೆಯಲು, ಆಗ ಎಂಟ್ರಿಕೊಟ್ಟಿದ್ದೆ ಜೂನಿಯರ್‌ ಚಿರಂಜೀವಿ ಅಲಿಯಾಸ್‌ ಮಗ ರಾಯನ್!

ಗೋಲ್ಡ್‌ ಕ್ಲಾಸ್‌ ವಿಥ್‌ ಮಯೂರ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಜೀವನ ಮತ್ತು ಹತ್ತಾರು ಗಾಸಿಪ್‌ಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ತಾಯ್ತನ, ಎರಡನೇ ಮದುವೆ, ಕುಟುಂಬದ ಒತ್ತಡ, ಸೋಷಿಯಲ್‌ ಮೀಡಿಯಾದ ನೆಗೆಟಿವ್‌ ವಾತಾವರಣ, ಮಗನ ಜತೆಗಿನ ಖುಷಿ, ಸಿನಿಮಾ‌ ಜೀವನ, ಭವಿಷ್ಯ, ನೆಪೋಟಿಸಂ, ಸರ್ಜಾ ಕುಟುಂಬದ ಬಗ್ಗೆಯೂ ಮಾತನಾ...