Bengaluru, ಫೆಬ್ರವರಿ 16 -- Max OTT: ಕಳೆದ ವರ್ಷದ ಡಿಸೆಂಬರ್‌ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಮೆಚ್ಚುಗೆ ಪಡೆದಿತ್ತು ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷಿತ ಮ್ಯಾಕ್ಸ್‌ ಸಿನಿಮಾ. ಕಾರ್ತಿಕೇಯನ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ, ಕನ್ನಡ ಮಾತ್ರವಲ್ಲದೆ, ತೆಲುಗು ತಮಿಳಿನಲ್ಲಿಯೂ ಬಿಡುಗಡೆ ಆಗಿತ್ತು. ವಿಮರ್ಶೆ ದೃಷ್ಟಿಯಿಂದ ಪಾಸಿಟಿವ್‌ ಪ್ರತಿಕ್ರಿಯೆ ಪಡೆದಿದ್ದ ಈ ಸಿನಿಮಾ, ಕಿಚ್ಚನ ಅಭಿಮಾನಿಗಳಿಗೂ ಮ್ಯಾಕ್ಸಿಮಮ್‌ ಇಷ್ಟವಾಗಿತ್ತು. ಹೀಗಿರುವಾಗಲೇ ಇದೇ ಸಿನಿಮಾ ಇದೀಗ ಕಿರುತೆರೆಯ ಬಳಿಕ ಒಟಿಟಿಗೂ ಆಗಮಿಸಿದೆ.

ತಮಿಳಿನ ನಿರ್ಮಾಪಕ ಕಲೈಪುಲಿ ಎಸ್‌ ದಾನು ನಿರ್ಮಾಣದಲ್ಲಿ ಮೂಡಿಬಂದ ಮ್ಯಾಕ್ಸ್‌ ಸಿನಿಮಾ, ಕಲೆಕ್ಷನ್‌ ವಿಚಾರದಲ್ಲಿಯೂ ಡಿಸೆಂಟ್‌ ಗಳಿಕೆ ಕಂಡಿತ್ತು. ಹತ್ರತ್ರ 50 ಕೋಟಿ ಕಲೆಕ್ಷನ್‌ ಮಾಡಿತ್ತು ಈ ಸಿನಿಮಾ. ಹೀಗಿರುವಾಗಲೇ ಒಟಿಟಿಗೂ ಮೊದಲೇ ಜೀ ಕನ್ನಡ ವಾಹಿನಿಯಲ್ಲಿ ಫೆ. 15ರ ಶನಿವಾರ ರಾತ್ರಿ 7:30ಕ್ಕೆ ಚೊಚ್ಚಲ ಪ್ರದರ್ಶನ ಕಂಡಿತ್ತು ಈ ಸಿನಿಮಾ. ಇದೀಗ ಇದೇ ಚಿತ್ರ ಅದೇ ದಿನದ ರಾತ್ರಿಯಿಂದ ಜ...