Bengaluru, ಫೆಬ್ರವರಿ 27 -- ಕಿಚ್ಚ ಸುದೀಪ್ ನಟಿಸಿರುವ ಮ್ಯಾಕ್ಸ್‌ ಚಿತ್ರಕ್ಕೆ ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳಿದ್ದಾರೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗಾಗಿ ಮಾಡಿರುವ ಈ ಸಿನಿಮಾವನ್ನು ಸ್ವತಃ ಕಿಚ್ಚ ಸುದೀಪ್ ಮತ್ತು ಕಲೈಪುಲಿ ಧಾನು ನಿರ್ಮಿಸಿದ್ದಾರೆ.

ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣ ಈ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಸಕ್ಕತ್ ಆಕ್ಷನ್, ಖಡಕ್ ಡೈಲಾಗ್, ಮತ್ತು ಹಾಡುಗಳ ಮೂಲಕ ಪ್ರೇಕ್ಷಕರನ್ನು ಅತ್ತಿತ್ತ ಕದಲದಂತೆ ಸೀಟಿನ ತುದಿಗೆ ತಂದು ಕೂರಿಸಿತ್ತು ಈ ಸಿನಿಮಾ.

ಕಿಚ್ಚ ಸುದೀಪ್ ಜತೆಗೆ ಟಾಲಿವುಡ್‌ ನಟ ಸುನಿಲ್, ವರಲಕ್ಷ್ಮಿ ಶರತ್ ಕುಮಾರ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ವಿಜಯ್ ಚಂಡೂರು ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಜೀ ಕನ್ನಡದಲ್ಲಿ ಫೆಬ್ರವರಿ 15ರ ರಾತ್ರಿ 7:30ಕ್ಕೆ ಜೀ ಕನ್ನಡದಲ್ಲಿ ಮ್ಯಾಕ್ಸ್‌ ಸಿನಿಮಾ ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌ ಆಗಿತ್ತು. ಇದೀಗ ಇದೇ ಚಿತ್ರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದ...