Bengaluru, ಮಾರ್ಚ್ 10 -- ಮಸೆರಾಟಿ ಗ್ರೆಕೇಲ್

ಮಸೆರಾಟಿ ಗ್ರೆಕೇಲ್ ಆಕರ್ಷಕ ವಿನ್ಯಾಸಗಳೊಂದಿಗೆ ಬರುತ್ತದೆ. ಈ ಎಸ್ ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಕಂಪ್ಲೀಟ್ ಬಿಲ್ಟ್-ಅಪ್ (ಸಿಬಿಯು) ಯೋಜನೆ ಮೂಲಕ ನೀಡಲಾಗುತ್ತದೆ. ಈ ಕಾರು ಜಿಟಿ, ಮೊಡೆನಾ, ಟ್ರೊಫಿಯೊ ಮತ್ತು ಆಲ್-ಎಲೆಕ್ಟ್ರಿಕ್ ರೂಪಾಂತರ ಫೋಲ್ಗೋರ್ ಸೇರಿದಂತೆ ನಾಲ್ಕು ಆವೃತ್ತಿಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದೆ. ಗ್ರೆಕೇಲ್ ಕಾರು ಭಾರತದ ಎಕ್ಸ್ ಶೋರೂಂ ದರದ ಪ್ರಕಾರ ರೂ.1.31 ಕೋಟಿಗಳಾಗಿದೆ.

ಕಾರಿನ ಹಿಂಭಾಗದಲ್ಲಿ ಸ್ಟೈಲಿಶ್ ಫಾಂಟ್‌ನಲ್ಲಿ ಬರೆಯಲಾದ ಮಸೆರಾಟಿ ಲೋಗೋವನ್ನು ಹೊಂದಿದೆ. ಈ ಲೋಗೋವನ್ನು ಕ್ರೋಮ್ ಸಿಲ್‌ನೊಂದಿಗೆ ವಿನ್ಯಾಸದಲ್ಲಿ ರೂಪಿಸಲಾಗಿದೆ, ಇದು ವಾಹನದ ರಿವರ್ಸ್ ಲೈಟ್‌ಗಳಲ್ಲಿ ವಿಲೀನಗೊಳ್ಳುತ್ತದೆ. ಕಾರಿನ ಕೆಳಭಾಗದಲ್ಲಿ ಡಿಫ್ಯೂಸರ್ ಇದೆ, ಎರಡೂ ಬದಿಯಲ್ಲಿ ಡ್ಯುಯಲ್ ಎಕ್ಸಾಸ್ಟ್ ಹೊಂದಿದೆ.

ಮುಂಭಾಗದ ಹೆಡ್‌ಲ್ಯಾಂಪ್ ಸ್ಪೋರ್ಟಿಯರ್ ಮಸೆರಾಟಿ ಎಂಸಿ 20 ನಲ್ಲಿರುವವುಗಳನ್ನು ಹೋಲುತ್ತವೆ, ಆದಾಗ್ಯೂ, ಕೆಲವು ಜನರಿಗೆ ಕಾರಿನ ಅನುಪಾತದಲ್ಲಿ ಅವು ...