ಭಾರತ, ಏಪ್ರಿಲ್ 17 -- ರೈಸ್‌ಬಾತ್‌ಗಳು ಮಾಡೋದು ತುಂಬಾ ಸುಲಭ, ಇದು ಹೊಟ್ಟೆ ತುಂಬುವಂತೆ ಮಾಡುತ್ತದೆ ಕೂಡ. ಹಾಗಂತ ಯಾವಾಗ್ಲೂ ಒಂದೇ ರೀತಿಯ ರೈಸ್‌ಬಾತ್‌ ಅಂದ್ರೆ ಯಾರಿಗೆ ಹಿಡಿಸುತ್ತೆ ಹೇಳಿ. ಅದಕ್ಕಾಗಿ ಭಿನ್ನ ರುಚಿಯನ್ನು ಟ್ರೈ ಮಾಡ್ಲೇಬೇಕು. ಪಲಾವ್‌, ಪುಳಿಯೋಗರೆ, ಚಿತ್ರಾನ್ನ, ವಾಂಗಿಬಾತ್‌ ಇದೆಲ್ಲಾ ಬಿಟ್ಟು ಇನ್ನೇನು ಮಾಡಬಹುದು ಎಂದು ನಿಮಗೂ ಅನ್ನಿಸಿರಬಹುದು.

ಹಲವು ಬಾರಿ ಮನೆಯಲ್ಲಿ ತರಕಾರಿ ಇರುವುದಿಲ್ಲ, ಇನ್ನೂ ಕೆಲವೊಮ್ಮೆ ಮಾಡಿದ ಅನ್ನ ಮಿಕ್ಕಿರುತ್ತದೆ. ಅದನ್ನು ಎಸೆಯಲು ಮನಸ್ಸು ಬರುವುದಿಲ್ಲ. ಇನ್ನೂ ಕೆಲವೊಮ್ಮೆ ವಿಶೇಷವಾಗಿ ಏನಾದ್ರೂ ಮಾಡಬೇಕು ಅನ್ನಿಸುತ್ತೆ, ಈ ಯಾವುದೇ ಸಂದರ್ಭಕ್ಕಾದ್ರೂ ಹೊಂದುವುದೇ ಮಸಾಲಾ ರೈಸ್‌. ಅನ್ನ ಬೇಯಿಸಿಟ್ಟುಕೊಂಡರೆ ಸಾಕು 5 ನಿಮಿಷಗಳಲ್ಲಿ ತಯಾರಾಗೋ ಈ ಮಸಾಲ ರೈಸ್‌ ಸಖತ್‌ ಟೇಸ್ಟಿ ಆಗಿರೋದು ಸುಳ್ಳಲ್ಲ.

ಬೇಕಾಗುವ ಸಾಮಗ್ರಿಗಳು: ಎಣ್ಣೆ - ಎರಡು ಚಮಚ, ಅನ್ನ - ಎರಡು ಕಪ್‌ಗಳು, ಕೊತ್ತಂಬರಿ ಪುಡಿ - ಎರಡು ಚಮಚ, ಗೋಡಂಬಿ - 5 ರಿಂದ 6, ಖಾರದ ಪುಡಿ - ಒಂದು ಚಮಚ, ಕಾಳುಮೆಣಸು - ಎ...