Bengaluru, ಏಪ್ರಿಲ್ 13 -- ಭಾರತದ ಜನಪ್ರಿಯ ಮಾರುತಿ ಸುಜುಕಿ ಕಂಪನಿಯು 2025ರ ಇಕೋ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಬಾರಿ ಮಾರುತಿ ಸುಜುಕಿ, ಹೊಸ ನವೀಕರಣದೊಂದಿಗೆ ಹಲವು ಸುರಕ್ಷತಾ ಸಾಧನಗಳನ್ನು ಸೇರಿಸಿದ್ದು, ಹೆಚ್ಚಿನ ಆಸನ ಕಾನ್ಫಿಗರೇಶನ್ ಆಯ್ಕೆಗಳನ್ನು ನೀಡಿದೆ. ಇದಲ್ಲದೆ, ಇಕೋ ಈಗ ಒಬಿಡಿ 2 ಕಾಂಪ್ಲೈಂಟ್ ಆಗಿದೆ. ಇದರೊಂದಿಗೆ ಪರಿಸರ ಕಾಳಜಿ ಮತ್ತು ಇಂಧನ ಉಳಿತಾಯಕ್ಕೆ ಹೆಚ್ಚಿನ ಕೊಡುಗೆ ನೀಡಲಿದೆ. ಹೊಸ ಇಕೋ 2025 ಆವೃತ್ತಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.69 ಲಕ್ಷಗಳಾಗಿದೆ.

ಮಾರುತಿ ಸುಜುಕಿ ಕಂಪನಿಯು ಇಕೋದ 7 ಸೀಟರ್ ಕಾರನ್ನು ಈಗ ಸ್ಥಗಿತಗೊಳಿಸಿದೆ. ಇಕೋದ 5 ಸೀಟರ್ ಆವೃತ್ತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಕಂಪನಿಯು ಎರಡು ಹೊಸ 6-ಸೀಟರ್ ಆವೃತ್ತಿಗಳನ್ನು ಶ್ರೇಣಿಗೆ ಸೇರಿಸಿದ್ದು, ಇದು ಕ್ಯಾಪ್ಟನ್ ಸೀಟುಗಳೊಂದಿಗೆ ಬರುತ್ತದೆ. ಅಲ್ಲದೆ, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಸೀಟ್ ಬೆಲ್ಟ್ ರಿಮೈಂಡರ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ...