Bengaluru, ಜನವರಿ 31 -- ಮದುವೆ ಎಂದರೆ ಹಲವರಿಗೆ ಸಂಭ್ರಮ, ಇನ್ನು ಹಲವರಿಗೆ ಭಯವೂ ಇರಬಹುದು. ಮತ್ತೆ ಕೆಲವರಿಗೆ ಕುತೂಹಲ. ಇನ್ನು ಕೆಲವರಿಗೆ ಆತಂಕ, ಆದರೆ ಮದುವೆ ಎನ್ನುವುದು ಜೀವನದ ಒಂದು ಅತ್ಯಂತ ಮಹ್ವತಪೂರ್ಣ ಘಟ್ಟವೂ ಹೌದು. ಮದುವೆಯ ಉದ್ದೇಶವನ್ನು ಸಫಲಗೊಳಿಸಲು ದಂಪತಿ ಶ್ರಮಿಸುತ್ತಾರೆ. ಅದಕ್ಕಾಗಿ ಕೆಲವೊಂದು ಹೊಂದಾಣಿಕೆ, ತ್ಯಾಗ ಅನಿವಾರ್ಯ. ಆದರೆ ಕೆಲವೊಮ್ಮೆ ಮದುವೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕೆ ಕಾರಣ ಹಲವು. ಜತೆಗೆ ಒಮ್ಮೆ ಉಂಟಾದ ಬಿರುಕನ್ನು ಸರಿಪಡಿಸದಿದ್ದರೆ, ಮತ್ತೆ ಅದರಿಂದ ಸಮಸ್ಯೆ ಸೃಷ್ಟಿಯಾಗಿ ದೊಡ್ಡದಾಗುತ್ತದೆ. ಹೀಗಾಗಿ ಸಮಸ್ಯೆಯನ್ನು ಕಂಡು, ಅದಕ್ಕೆ ಪರಿಹಾರವನ್ನೂ ದಂಪತಿಯೇ ಮಾಡಿಕೊಳ್ಳುವುದು ಸೂಕ್ತ. ಹಾಗಾದಾಗ ಮಾತ್ರ ಸಂಬಂಧವನ್ನು ಸುಧಾರಿಸಬಹುದು. ಇಲ್ಲವಾದರೆ ಸುಗಮ ದಾಂಪತ್ಯಕ್ಕೆ ಅಡ್ಡಿಯಾಗಬಹುದು ಮತ್ತು ಮಾನಸಿಕ ನೆಮ್ಮದಿ ಇಲ್ಲವಾಗಬಹುದು.

ಇಬ್ಬರು ವಿಭಿನ್ನ ಆಲೋಚನೆಯವರು ಒಟ್ಟುಗೂಡಿದಾಗ ಅಲ್ಲಿ ಭಿನ್ನಾಭಿಪ್ರಾಯ ಸಹಜ. ಅಂತಹ ಸಂದರ್ಭದಲ್ಲಿ ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕ...