ಭಾರತ, ಫೆಬ್ರವರಿ 9 -- ವೈವಾಹಿಕ ಜೀವನವೆಂದರೆ ಎರಡು ಜೀವಗಳನ್ನು ಬೆಸೆಯುವ ಪವಿತ್ರ ಬಂಧ. ಇದು ಮನಸ್ಸನ್ನು ಮಾತ್ರವಲ್ಲ, ಎರಡು ಕುಟುಂಬಗಳನ್ನು ಬೆಸೆಯುತ್ತದೆ. ಮದುವೆ ಎಂಬುದು ಜೀವನಪೂರ್ತಿ ಜೊತೆಯಾಗಿ ಸಾಗುವ ಪಯಣ. ಆದರೆ ಸಾಮಾನ್ಯವಾಗಿ ಮದುವೆಯಾದ ಹೊಸತರಲ್ಲಿ ಇದ್ದ ಹೊಂದಾಣಿಕೆ, ಖುಷಿ, ಆಕರ್ಷಣೆ ನಂತರದ ದಿನಗಳಲ್ಲಿ ಇರುವುದಿಲ್ಲ. ದಾಂಪತ್ಯದಲ್ಲಿ ಉಂಟಾಗುವ ವೈಮನಸ್ಸು ದಂಪತಿಗಳ ಮೇಲೆ ಮಾತ್ರವಲ್ಲ ಎರಡು ಕುಟುಂಬಗಳ ಮೇಲೂ ಪರಿಣಾಮ ಬೀರುತ್ತದೆ.

ಹಾಗಂತ ವೈವಾಹಿಕ ಜೀವನದಲ್ಲಿ ಸದಾ ಖುಷಿಯಿಂದ ಇರಲು ಸಾಧ್ಯವೇ ಇಲ್ಲ ಅಂತಲ್ಲ. ಅದಕ್ಕಾಗಿ ಕೆಲವು ಸೂತ್ರಗಳನ್ನು ಅನುಸರಿಸಬೇಕು. ವೈವಾಹಿಕ ಜೀವನದಲ್ಲಿ ಸದಾ ಖುಷಿ ಇರಬೇಕು ಅಂದ್ರೆ ಈ ಕೆಲವು ತಪ್ಪುಗಳನ್ನು ಎಂದಿಗೂ ಮಾಡಬಾರದು.

ಮದುವೆ ಎಂದರೆ ಗಂಡ -ಹೆಂಡತಿಯ ಸಂಬಂಧವಲ್ಲ ಅಥವಾ ಪ್ರಣಯದಿಂದ ತುಂಬಿದ ಜೀವನಕ್ಕೆ ಸೀಮಿತವಾಗಿರುವುದಿಲ್ಲ. ಗಂಡ-ಹೆಂಡತಿ ಎಂದರೆ 'ದಿ ಬೆಸ್ಟ್ ಫ್ರೆಂಡ್ಸ್' ಕೂಡ ಆಗಿರುತ್ತಾರೆ. ತಮ್ಮೊಳಗೆ ಅಡಗಿರುವ ಚಿಕ್ಕ ಮಕ್ಕಳ ಮನಸ್ಸು, ಮುಕ್ತ ನಗು, ಕಾಮಿಡಿ ಹೀಗೆ ಎಲ್ಲಾ...